Advertisement

Power purchase: ಕೆಸಿಆರ್‌ ಅವಧಿಯಲ್ಲಿ 6 ಸಾವಿರ ಕೋಟಿ ನಷ್ಟ?

10:07 PM Jun 18, 2024 | Team Udayavani |

ಹೈದರಾಬಾದ್‌: ಇಂಧನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿ ಸರ್ಕಾರದಲ್ಲಿ ನಡೆದ ಅವ್ಯವಹಾರದಿಂದಾಗಿ ತೆಲಂಗಾಣ ಬೊಕ್ಕಸಕ್ಕೆ 6000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

Advertisement

ಛತ್ತೀಸ್‌ಗಢದೊಂದಿಗಿನ ವಿದ್ಯುತ್‌ ಖರೀದಿ ಒಪ್ಪಂದಗಳನ್ನು ತೆಲಂಗಾಣ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗವು ಅನುಮೋದನೆ ನೀಡಿಲ್ಲ. ಪ್ರತಿ ಯೂನಿಟ್‌ ವಿದ್ಯುತ್‌ಗೆ 3.9 ರೂ. ನೀಡಲಾಗಿದೆ ಎಂದು ಹೇಳಿದ್ದರೂ, ವಾಸ್ತವವಾಗಿ 5.64 ರೂ. ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ವಿದ್ಯುತ್‌ ಖರೀದಿಯಲ್ಲಿನ ಅಕ್ರಮಗಳ ತನಿಖೆಗೆ ಈಗಿನ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್‌ ತನಿಖಾ ಆಯೋಗವೇ ಅಕ್ರಮ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next