Advertisement

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

08:24 PM Nov 26, 2024 | Team Udayavani |

ಹೈದರಾಬಾದ್‌: ಊಟದ ವಿರಾಮದ ವೇಳೆ ಪೂರಿ ತಿನ್ನುವಾಗ ಗಂಟಲಲ್ಲಿ ಸಿಲುಕಿ, ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಬೇಗಂಪೇಟ್‌ನಲ್ಲಿ ನಡೆದಿದೆ.

Advertisement

ಮೃತ ಬಾಲಕನನ್ನು ಸ್ಥಳೀಯ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೀರೇನ್‌ ಜೈನ್‌ (11) ಎಂದು ಗುರುತಿಸಲಾಗಿದೆ.

ವೀರೇನ್‌ ಊಟದ ವಿರಾಮದಲ್ಲಿ, ತನ್ನ ಮನೆಯಿಂದ ತಂದಿದ್ದ 3 ಪೂರಿಗಳನ್ನು ಒಂದೇ ಬಾರಿಗೆ ತಿನ್ನಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಗಂಟಲಲ್ಲಿ ಪೂರಿ ಸಿಕ್ಕಿಕೊಂಡಿದ್ದು, ಉಸಿರಾಟ ಸಮಸ್ಯೆಯಿಂದ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಶಾಲಾ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next