ನವದೆಹಲಿ:ಅಧಿಕಾರದ ಆಸೆಗಾಗಿ ದೇಶದ ಹಳೇಯ ಪಕ್ಷ ರಾತ್ರೋರಾತ್ರಿ ಪ್ರತಿಯೊಬ್ಬ ಭಾರತೀಯನ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಿತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ (ಜೂನ್ 25) ಕಾಂಗ್ರೆಸ್ ಪಕ್ಷ 47 ವರ್ಷಗಳ ಹಿಂದೆ ಘೋಷಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಚೆನ್ನೈ ಭಾರೀ ಗಾಳಿ-ಮಳೆ; ಕಾರಿನ ಮೇಲೆ ಮರ ಉರುಳಿ ಬಿದ್ದು ಮಹಿಳೆ ಸಾವು, ಇಬ್ಬರಿಗೆ ಗಾಯ
1975ರ ಜೂನ್ 25ರಂದು ಚಾಲ್ತಿಯಲ್ಲಿದ್ದ ಆಂತರಿಕ ಕಲಹದಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಲು ಮತ್ತು ಸರ್ವಾಧಿಕಾರಿ ಮನಸ್ಥಿತಿಯನ್ನು ಸೋಲಿಸಲು ಎಲ್ಲವನ್ನೂ ತ್ಯಾಗ ಮಾಡಿದ ಪ್ರತಿಯೊಬ್ಬ ದೇಶಭಕ್ತರಿಗೂ ನಮನ ಸಲ್ಲಿಸುವುದಾಗಿ ಶಾ ಟ್ವೀಟ್ ಮಾಡಿದ್ದಾರೆ.
1975 ಜೂನ್ 25ರಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ರಾತ್ರೋರಾತ್ರಿ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಿತ್ತು. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ, ಕ್ರೌರ್ಯಕ್ಕಾಗಿ ವಿದೇಶಿ ಆಡಳಿತ ನಡೆಸಿತ್ತು ಎಂದು ಶಾ ಕಿಡಿಕಾರಿದ್ದಾರೆ.
1975ರ ತುರ್ತುಪರಿಸ್ಥಿತಿ ದೇಶದ ಇತಿಹಾಸದ ಕರಾಳ ಅಧ್ಯಾಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದರು. ಈ ಕರಾಳ ಇತಿಹಾಸವನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ. ಎಲ್ಲಾ ಭಾರತೀಯರು ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಗೌರವ ಕಾಪಾಡುವ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.