Advertisement

ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ಪೋಸ್ಟರ್‌ ಅಭಿಯಾನ

12:47 AM Jun 25, 2024 | Team Udayavani |

ಮಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಕ್ಲಾಕ್‌ ಟವರ್‌ ಬಳಿ ಸೋಮವಾರ ಪೋಸ್ಟರ್‌ ಅಭಿಯಾನ ನಡೆಯಿತು.

Advertisement

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ “ದೇಶದಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ಆಶಯ ವನ್ನು ಉಲ್ಲಂ ಸಿತ್ತು. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರಿಗೆ ಅವಮಾನಿಸಿದ ಕಾಂಗ್ರೆಸ್‌ ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.

ರಾಹುಲ್‌ ಕ್ಷಮೆ ಯಾಚಿಸಲಿ: ಪೂಂಜ
ಶಾಸಕ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಂಜ ಮಾತನಾಡಿ, ಅಂಬೇಡ್ಕರ್‌ ಹಿತೈಷಿಗಳು ಎನ್ನುತ್ತಾ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿರುವುದು, ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ವರ್ತನೆ ತೋರಿರುವುದು ಕಾಂಗ್ರೆಸ್‌. ಸಂವಿಧಾನದ ರಕ್ಷಕರು ಎಂದು ಪದೇಪದೆ ಹೇಳುವ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್‌ ರಾಜ್‌ ಕೃಷ್ಣಾಪುರ, ಯುವಮೋರ್ಚಾ ಕಾರ್ಯಕರ್ತರು ಭಾಗವಹಿದ್ದರು.

ಉಡುಪಿ: ಕಾಂಗ್ರೆಸ್‌ ಕಚೇರಿಗೆ
ಭಿತ್ತಿಪತ್ರ ಅಂಟಿಸಲು ಯತ್ನ
ಉಡುಪಿ: ಕಾಂಗ್ರೆಸ್‌ ಸರಕಾರದ ದುರಾಡಳಿತ, ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದರ ವಿರುದ್ಧ ಜಿಲ್ಲಾ ಅಧ್ಯಕ್ಷ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಕಚೇರಿಗೆ ಭಿತ್ತಿಪತ್ರ ಅಂಟಿಸಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ಕಡಿಯಾಳಿಯಲ್ಲಿ ತಡೆದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಪ್ರಭು ಅವರು ಬಿಜೆಪಿ ನಾಯಕರಿಂದ ಮನವಿ ಸ್ವೀಕರಿಸಿದರು. ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್‌, ನಗರ ಠಾಣೆಯ ಎಸ್‌ಐ ಭರತೇಶ್‌, ಮಣಿಪಾಲದ ಠಾಣೆಯ ಪಿಎಸ್‌ಐ ರಾಘವೇಂದ್ರ ಹಾಗೂ ಪೊಲೀಸ್‌ ಸಿಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next