Advertisement

ಧನಾತ್ಮಕ ಚಿಂತನೆಗಳು ಸಾಧನೆಗೆ ರಹದಾರಿ: ಪ್ರೊ|ವಿಜಯಲಕ್ಷೀ

11:55 AM Jul 15, 2017 | Team Udayavani |

ಧಾರವಾಡ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಅಳವಡಿಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾ ಧಿಸಬಹುದು ಎಂದು ಕವಿವಿಯ ಸಮಾಜ ನಿಖಾಯದ ಡೀನ್‌ ಪ್ರೊ| ವಿಜಯಲಕ್ಷ್ಮೀ ಅಮ್ಮಿನಬಾವಿ ಹೇಳಿದರು. 

Advertisement

ಕರ್ನಾಟಕ ಕಲಾ ಮಹಾವಿದ್ಯಾಲಯದ ಫ್ಯಾರೇನ್‌ ಸಭಾಂಗಣದಲ್ಲಿ 2017-18ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಹಂತದಲ್ಲಿ ಮನಸ್ಸು ತುಂಬಾ ಸೂಕ್ಷ್ಮತೆಯಿಂದ ಕೂಡಿದ್ದು, ಅದನ್ನು ನಿಯಂತ್ರಿಸಬೇಕಾದರೆ ನಮ್ಮ ಆಲೋಚನೆಗಳು ಧನಾತ್ಮಕವಾಗಿರಬೇಕು ಎಂದರು.

ಮನುಷ್ಯನಲ್ಲಿರುವ ಸಂವೇದನೆಗಳು ಹಿಡಿತದಲ್ಲಿ ಇದ್ದಾಗ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ. ಆದರೆ, ವಿದ್ಯಾರ್ಥಿಗಳು ಇಂದು ಹತಾಶೆ ನಿರಾಸೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೂಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ಮಾರ್ಚ್‌ ತಿಂಗಳಿನಲ್ಲಿ ಜರುಗಿದ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಿಯು ಪ್ರಥಮ ಮತ್ತ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಹೂಗುತ್ಛ ನೀಡಿ ಸತ್ಕರಿಸಲಾಯಿತು.

ಕರ್ನಾಟಕ ಕಲಾ ಮಹಾವಿದ್ಯಾಲಯವು ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ| ರಾಜೇಶ್ವರಿ ಮಹೇಶ್ವರಯ್ಯ ರಚಿಸಿದ ಕೆಸಿಡಿ ಜಯಗೀತೆಯನ್ನು ಗಾಯಕಿ ಸುಜಾತಾ ಗುರವ ಪ್ರಸ್ತುತಪಡಿಸಿದರು. 

Advertisement

ಡಾ| ಎಮ್‌.ಬಿ. ದಳಪತಿ, ಡಾ| ಅರುಣಾ ಹಳ್ಳಿಕೇರಿ, ಡಾ| ವಿ. ಶಾರದಾ, ಡಾ| ಸ್ಟೇಲ್ಲಾ ಸ್ಟಿವನ್‌, ಡಾ| ವಿಭಾ ಕುಲಕರ್ಣಿ ಇದ್ದರು. ಮನೋವಿಜ್ಞಾನದ ಮುಖ್ಯಸ್ಥ ಡಾ| ಎಸ್‌.ಜಿ. ಜಾಧವ್‌ ಪರಿಚಯಿಸಿದರು. ಡಾ| ರಜನಿ ಎಚ್‌. ನಿರೂಪಿಸಿದರು. ಡಾ| ವಾಮದೇವ ತಳವಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next