Advertisement

ಸಮಸ್ಯೆಗೆ ಸಕಾರಾತ್ಮಕ ಆಲೋಚನೆಯೇ ಪರಿಹಾರ

02:10 PM Nov 19, 2018 | |

ನಕಾರಾತ್ಮಕ ಆಲೋಚನೆಗಳು ಸಮುದ್ರದ ಗಾಢತೆ, ಭೂಮಿಯ ಅಳತೆ, ಅನಂತತೆಗೆ ಹೋಗಬಹುದಾದ ಆಕಾಶವನ್ನೂ ಮೀರಿ ಹೋಗಬಹುದು. ಆದರೆ ನಿಜವಾದ ಜೀವನ ಆಲೋಚನೆಗಳು ವ್ಯಕ್ತಿಯ ಜೀವನವನ್ನು ಸಕಾರಾತ್ಮಕತೆಗೆ ಬದಲಿಸುತ್ತವೆ. ಸರಿಯಾದ ಆಲೋಚನೆಗಳು ನಮ್ಮ ಜೀವನವನ್ನು ಉತ್ತಮ ಹಾದಿಯತ್ತ ನಡೆಸುತ್ತದೆ.

Advertisement

ಜೀವನ ಮತ್ತು ಜೀವನದ ಆಲೋಚನೆಗಳು ಕೆಲವು ಸಂದರ್ಭ ನಮ್ಮ  ಆಲೋಚನೆ ಹಾಗೂ ಅದರ ಪರಿಣಾಮದಿಂದ ಗೌರವ ಕಳೆದುಕೊಳ್ಳುತ್ತದೆ. ನಮಗೆ ಇಷ್ಟವಾಗುವಂತಹ ಜೀವನವನ್ನು ಪ್ರೀತಿಸಿದಾಗ ಸ್ವರ್ಗದ ಅನುಭವ ಲಭಿಸುತ್ತದೆ. ಜೀವನ ಎಂದರೆ ತೆರೆದ ಪುಸ್ತಕದ ಖಾಲಿ ಪುಟಗಳು. ನೀವು ಅಲ್ಲಿ ಜೀವನ ಎಂದರೆ ಏನು, ನಿಮ್ಮ ಅನುಭವದ ಆಧಾರದ ಮೇಲೆ ಬೆಳಕು ಚೆಲ್ಲುತ್ತಾ ಸಾಗಬೇಕು. ಇದೇ ಜೀವನ. ಈ ನಡುವೆ ಕಷ್ಟ-ಸುಖ, ಗೆಲುವು-ಸೋಲು, ಹೀಗೆ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಇವುಗಳನ್ನು ಸಮಚಿತ್ತದಿಂದ ಸಾಧಿಸಿ ಮುನ್ನಡೆಯುವುದೇ ಜೀವನ.

ಜೀವನದ ನಡುವೆ ಕೆಲವರು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುತ್ತಾರೆ. ಇದರ ಪರಿಣಾಮವಾಗಿ ನಮ್ಮನ್ನು ಬಾಲ್ಯದಿಂದ ಹೆತ್ತು, ಹೊತ್ತು ಸಲಹುವ ಮಮತೆಯ ಹೆತ್ತವರು ಸದಾ ಕೊರಗಿನಿಂದಲೇ ಜೀವಿಸಬೇಕಾಗುತ್ತದೆ. ಹೆತ್ತವರು ನಮ್ಮನ್ನು ಸಾಕಿ ಸಲುಹಿದ ಕಾರಣಕ್ಕೆ ನಾವು ಅವರಿಗೆ ಈ ರೀತಿ ಶಿಕ್ಷೆ ನೀಡುವುದು ಸರಿಯೇ ಎಂಬುದನ್ನು ಸ್ವಲ್ಪ ಯೋಚಿಸಿದರೆ ನಾವು ಅಂತಹ ಕೃತ್ಯಕ್ಕೆ ಮನಸ್ಸು ಮಾಡಲು ಸಾಧ್ಯವಿಲ್ಲ.

ಆದರೆ ಕೆಲವು ಪರಿಸ್ಥಿತಿಗಳು ನಮ್ಮನ್ನು ಅಂತಹ ಕೂಪಕ್ಕೆ ತಳ್ಳಿದರೂ ನಾವು ದೃತಿಗೆಡದೇ ಸಮಚಿತ್ತದಿಂದ ನಿಭಾಯಿಸಬೇಕಾಗುತ್ತದೆ. ಹಾಗಾದರೆ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವೇ? ಅಲ್ಲ. ಪ್ರತಿಯೊಂದು ಸಮಸ್ಯೆ ಹೇಗೆ ಉದ್ಭವಿಸಿತೋ ಅದಕ್ಕೆ ತನ್ನದೇ ಆದ ರೀತಿಯ ಪರಿಹಾರಗಳಿವೆ. ಕೆಲವು ಸಮಸ್ಯೆಗಳು ಬಗೆಹರಿಯಲು ದೀರ್ಘ‌ ಸಮಯಾವಕಾಶ ಬೇಕಾಗುತ್ತದೆ. ಅದೇ ರೀತಿ ಕೆಲವು ಸಮಸ್ಯೆಗಳು ನಮ್ಮ ಆಲೋಚನ ಮಟ್ಟದ ಮೇಲೆ ಅವಲಂಬಿಸಿದ್ದು, ನಾವು ಆ ಸಂದರ್ಭಕ್ಕೆ ಸ್ಪಂದಿಸುವ ರೀತಿಯ ಮೇಲೆ ಅದು ನಿರ್ಧರಿತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next