Advertisement

ಕನ್ನಡ ಶಾಯರಿಗಳ ಜನಪ್ರಿಯ ಸಾಹಿತಿ ಇಟಗಿ ಈರಣ್ಣ ವಿಧಿವಶ

11:42 AM Mar 13, 2017 | udayavani editorial |

ಬೆಂಗಳೂರು : ಶ್ರೋತೃಗಳನ್ನು  ಕ್ಷಣಾರ್ಧದೊಳಗೆ ಶಾಯರಿ ಲೋಕಕ್ಕೆ ಒಯ್ಯುವ ಧೀಮಂತ ಕನ್ನಡ ಶಾಯರಿ ಸಾಹಿತಿ ಪ್ರೊ. ಇಟಗಿ ಈರಣ್ಣ ಅವರು ತಮ್ಮ 68ರ ಹರೆಯದಲ್ಲಿ ಶಿವಮೊಗ್ಗೆಯಲ್ಲಿನ ತಮ್ಮನಿವಾಸದಲ್ಲಿ ಭಾನುವಾರ ರಾತ್ರಿ ನಿಧನಹೊಂದಿರು. 

Advertisement

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಾಯರಿ ಮಾಸ್ತರ್‌ ಎಂದೇ ಖ್ಯಾತರಾಗಿದ್ದ ಈರಣ್ಣ ಅವರು ಆರು ವರ್ಷಗಳ ನಿವೃತ್ತರಾದಾಗ ಶಿವಮೊಗ್ಗೆಗೆ ಬಂದು ನೆಲೆಸಿದ್ದರು. 

ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇ ಹಡಗಲಿಯವರಾದ ಈರಣ್ಣ ಅವರು ಕನ್ನಡದಲ್ಲಿ ಶಾಯರಿ ಬರೆದು ಅಪಾರ ಜನಮೆಚ್ಚುಗೆ ಗಳಿಸಿದ್ದ ಏಕೈಕ ಶಾಯರಿ ಸಾಹಿತಿ ಎಂದು ಗುರುತಿಸಲ್ಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next