ಶಹಾಬಾದ: ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದ ಕಾಮಗಾರಿಯಿಂದ ಸಾರ್ವಜನಿಕರು ಬೇಸತ್ತುಹೋಗಿದ್ದಾರೆ.
ನಗರೋತ್ಥಾನ ಮೂರನೇ ಹಂತದ ಯೋಜನೆಯಲ್ಲಿ 20 ಕೋಟಿ ರೂ. ಅನುದಾನದಲ್ಲಿ ರಸ್ತೆ, ಚರಂಡಿ, ಸೇತುವೆನಿರ್ಮಿಸಲು ಗುತ್ತಿಗೆದಾರರು ಕಳೆದ ಎರಡುವರ್ಷದಿಂದ ಹರಸಾಹಸ ಪಡುತ್ತಿದ್ದಾರೆ.
ಅಂಕುಡೊಂಕು ಸೇತುವೆ: ಒಂದೂವರೆ ವರ್ಷದ ಹಿಂದೆ ಅಜನಿ ಹಳ್ಳಕ್ಕೆ ನಗರೋತ್ಥಾನ ಯೋಜನೆ ಏಯಡಿ ಸುಮಾರು 2 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ಕ್ರಿಯಾಯೋಜನೆ ಪ್ರಕಾರ ಹಳೆ ಸೇತುವೆ ಬಿಳಿಸಿ, ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಿಸಬೇಕಿತ್ತು. ಆದರೆ ಹಳೆ ಸೇತುವೆಯನ್ನು ಬೀಳಿಸದೇ ಹೊಸ ಸೇತುವೆಯನ್ನು ಅಂಕು ಡೊಂಕಾಗಿ ನಿರ್ಮಿಸಲಾಗಿದೆ. ಮೇಲ್ಭಾಗದ ರಸ್ತೆ ಕಿತ್ತು ಹೋಗಿದೆ. ಕೆಲವೆಡೆ ಸೀಳಿಕೊಂಡಿದೆ. ಆದರೆ ನಗರಸಭೆ ಜೆಇ, ಎಇಇ, ಡಿಯುಡಿಸಿಯಜೆಇ, ಎಇಇ, ಮೂರನೇ, ನಾಲ್ಕನೇ ತಪಾಸಣಾ ವ್ಯಕ್ತಿಗಳು ಈ ಕುರಿತು ಗಮನ ಹರಿಸದೇ ಇರುವುದು ದುರ್ದೈವದ ಸಂಗತಿ.
ಸೇತುವೆ ಮೇಲೆ ಹೋಗಬೇಕಾದರೆ ರಸ್ತೆ ನೇರವಾಗಿಲ್ಲ. ಅಲ್ಲದೇ ಸೇತುವೆ ಮೇಲ್ಭಾಗದ ರಸ್ತೆ ಕಿತ್ತು ಹೋಗಿದೆ. ರಸ್ತೆ ಸೀಳಿಕೊಂಡು ಬೀಳುವಸ್ಥಿತಿಯಲ್ಲಿದೆ. ಈ ಕುರಿತು ಕಳೆದ ಒಂದುವರ್ಷದಿಂದ ಜನರು ದೂರು ಸಲ್ಲಿಸಿದರೂಯಾವುದೇ ಕ್ರಮ ಕೈಗೊಂಡಿಲ್ಲ.
ಕಳಪೆ ರಸ್ತೆ: ಬಸವೇಶ್ವರ ನಗರದಿಂದ ಮರಗೋಳ ಕಾಲೇಜಿನ ಡಾಂಬರೀಕರಣ ರಸ್ತೆಪೂರ್ಣಗೊಳ್ಳುವ ಮೊದಲೇ ಸಂಪೂರ್ಣಹಾಳಾಗಿತ್ತು. ರಸ್ತೆ ತುಂಬಾ ತೆಗ್ಗು ಬಿದ್ದಿವೆ.ಆದರೂ ಇದಕ್ಕೆ ಹೆಚ್ಚಿನ ಅನುದಾನದ ಅನುಮೋದನೆ ಪಡೆದು, ಮತ್ತೆ ಸಿಸಿ ರಸ್ತೆನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಈಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಹಳೆ ಚರಂಡಿಗಳನ್ನು ಕೆಡವಿ ವರ್ಷಗಳಾಗಿವೆ. ಈಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಗುತ್ತಿಗೆದಾರನೇ ಗೊತ್ತಿಲ್ಲ: ವಿಪರ್ಯಾಸದ ಸಂಗತಿಯೆಂದರೆ ನಗರೋತ್ಥಾನ ಮೂರನೇಹಂತದ ಕಾಮಗಾರಿ ಟೆಂಡರ್ ಪಡೆದ ಮುಖ್ಯಗುತ್ತಿಗೆದಾರ ಯಾರೆಂಬುದು ಇಲ್ಲಿಯವರೆಗೆನಗರಸಭೆ ಅಧಿ ಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಹೀಗೆಂದು ಅಧಿಕಾರಿಗಳೇ ಹೇಳುತ್ತಾರೆ. ಶಹಾಪುರ ಮೂಲದ ತಿರುಪತಿ ಎನ್ನುವ ಉಪ ಗುತ್ತಿಗೆದಾರ ಬಂದು ಹೋಗುತ್ತಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರಿಂದ ದೂರುಗಳುಬಂದಿದ್ದು, ಸಂಬಂಧಪಟ್ಟಗುತ್ತಿಗೆದಾರನಿಗೆ ಈಗಾಗಲೇನೋಟಿಸ್ ನೀಡಿದ್ದೇವೆ. ರಸ್ತೆ ಕಾಮಗಾರಿ ಪ್ರಾರಂಭವಾಗಿದೆ.ಮಳೆಗಾಲದಲ್ಲಿ ಹೆಚ್ಚಿನ ಪ್ರವಾಹಉಂಟಾದ ಕಾರಣ ಅಜನಿ ಹಳ್ಳದ ಸೇತುವೆ ರಸ್ತೆ ಬಿರುಕುಬಿಟ್ಟಿದೆ. ಶೀಘ್ರವೇ ಸರಿಪಡಿಸಲಾಗುವುದು.
-ಡಾ| ಕೆ. ಗುರುಲಿಂಗಪ್ಪ, ಪೌರಾಯುಕ್ತ, ನಗರಸಭೆ