Advertisement

ಕೊಳವೆಬಾವಿ ನೀರು ಕಲುಷಿತ; ಕುಡಿಯುವ ನೀರಿಗಾಗಿ ಅಲೆದಾಟ

09:56 AM Mar 28, 2018 | Team Udayavani |

ಬಜಪೆ: ಗ್ರಾಮ ಪಂಚಾಯತ್‌ನ ಐದನೇ ವಾರ್ಡ್‌ನ ಶಾಂತಿಗುಡ್ಡೆ ಪ್ರದೇಶದಲ್ಲಿ ಬೇಸಗೆಯ ಆರಂಭದಲ್ಲೇ
ನೀರಿನ ಸಮಸ್ಯೆ ಕಾಡತೊಡಗಿದೆ. ಈ ಪ್ರದೇಶದ ಸುತ್ತ ಎಂಎಸ್‌ಇಝಡ್‌ಗಾಗಿ ಭೂಸ್ವಾಧೀನಗೊಂಡಿದೆ. ಶಾಂತಿಗುಡ್ಡೆಯಲ್ಲಿರುವ ಕೊಳವೆ ಬಾವಿಯ ನೀರು ಕಲುಷಿತವಾಗಿರುವುದರಿಂದ ಇಲ್ಲಿನ ನಿವಾಸಿಗಳು ನೀರು ಇದ್ದರೂ ಕುಡಿಯುವ ನೀರಿಗಾಗಿ ಅಲೆದಾಡಬೇಕಿದೆ.

Advertisement

ವಾರ್ಡ್‌ನ ವ್ಯಾಪ್ತಿ
ಅರೆಕಲ್ಲು, ಪೊರ್ಕೋಡಿ ದ್ವಾರ, ಅರ್ಲ, ಪಾದೆಮನೆ, ಕುಂಟಲ ಬಲ್ಲೆ, ಮುಂಡಾರು, ತಾರಿಕಂಬ್ಳ  ಜಂಕ್ಷನ್‌, ಚೆಕ್‌ಪೋಸ್ಟ್‌, ಕೊಂಚಾರ್‌, ಕೊಂಚಾರ್‌ ಮಸೀದಿ ಬಳಿ, ಕೊಂಚಾರ್‌ ಆಶ್ರಯ ಕಾಲನಿ, ಶಾಂತಿಗುಡ್ಡೆ , ಪರಿಶಿಷ್ಟ ಪಂಗಡ ಕಾಲನಿಗೆ ಇರುವ ಗ್ರಾ.ಪಂ. ಸದಸ್ಯರು ಆಯಿಷಾ, ವೇದಾವತಿ, ಸಾಹುಲ್‌ ಹಮೀದ್‌, ಸುರೇಂದ್ರ ಪೆರ್ಗಡೆ.

ಒಟ್ಟು 509 ಕಟ್ಟಡಗಳಲ್ಲಿ 502 ಮನೆ, 7 ಅಂಗಡಿ, 6 ಫ್ಲ್ಯಾಟ್‌, 258 ನೀರು ಸಂಪರ್ಕವಿರುವ ಮನೆಗಳು. ಅಲ್ಲದೇ
2 ಅಂಗನವಾಡಿ, ದೈವಸ್ಥಾನ, ಭಜನಾ ಮಂದಿರ, ಮಸೀದಿ ಇವೆ.

ಮೂರು ಟ್ಯಾಂಕ್‌ಗಳು
ನೀರು ಸರಬರಾಜಿಗೆ ಕುಂಟಲ ಬಲ್ಲೆ, ಕೊಂಚಾರ್‌, ಶಾಂತಿಗುಡ್ಡೆ, ಶಾಂತಿಗುಡ್ಡೆ ಕ್ರಾಸ್‌, ತೊಟ್ಟಿಲಗುರಿ ನಿರ್ವಾಸಿತರ ಕಾಲನಿ, ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ಕೊಳವೆ ಬಾವಿಗಳಿವೆ. ಶಾಂತಿಗುಡ್ಡೆಯಲ್ಲಿ 50 ಸಾವಿರ ಲೀ. ಸಾಮರ್ಥ್ಯದ ಒವರ್‌ಹೆಡ್‌ ಟ್ಯಾಂಕ್‌ ಮತ್ತು ಕೊಂಚಾರ್‌ ಆಶ್ರಯ ಕಾಲನಿ, ತಾರಿಕಂಬ್ಳ, ಕುಂಟಲ ಬಲ್ಲೆಯಲ್ಲಿ 20 ಸಾವಿರ ಲೀ.ಸಾಮರ್ಥ್ಯದ ಸಿಎಸ್‌ಎಲ್‌ಆರ್‌ ಒಟ್ಟು ಮೂರು ಟ್ಯಾಂಕ್‌ಗಳಿವೆ. ಶಾಂತಿಗುಡ್ಡೆ ಹಾಗೂ ಅರೆಕಲ್ಲಿನಲ್ಲಿ ಸರಕಾರಿ ಬಾವಿ ಇದ್ದು, ಸ್ಥಳೀಯರೆಲ್ಲರೂ ಇದನ್ನೇ ಬಳಸಬೇಕಿದೆ.

ಪೈಪ್‌ ಲೈನ್‌ ವ್ಯವಸ್ಥೆ
ತಾರಿಕಂಬ್ಳದಿಂದ ಮುಂಡಾರು, ಪೊರ್ಕೋಡಿ ದ್ವಾರದಿಂದ ತಾರಿಕಂಬ್ಳ, ಪೊರ್ಕೋಡಿ ದ್ವಾರದಿಂದ ಕುಂಟಲಪಲ್ಕೆ,
ಶಾಂತಿಗುಡ್ಡೆ ಕಾಲನಿ, ಕೊಂಚಾರ್‌ ಮಸೀದಿ, ಅಶ್ರಯ ಕಾಲನಿಯಲ್ಲಿ ನೀರಿನ ಸರಬರಾಜಿಗೆ ಪೈಪ್‌ ಲೈನ್‌ಗಳಿವೆ. ಈ ಬಾರಿ 35,000 ರೂ. ಕುಡಿಯುವ ನೀರಿನ ಪೈಪ್‌ಗಳಿಗಾಗಿ  ಪಂಚಾಯತ್‌ ಖರ್ಚು ಮಾಡಿದೆ.

Advertisement

ಈ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗಾಗಿ 69,290 ರೂ. ವೆಚ್ಚದಲ್ಲಿ ಬಾಳಿಕೆ ಬಳಿ ಪೈಪ್‌ ಲೈನ್‌ ವಿಸ್ತರಿಸಲಾಗಿದೆ. ಶಾಂತಿಗುಡ್ಡೆಯಲ್ಲಿ ನೀರಿನ ಸಮಸ್ಯೆ ಕೊಂಚ ಸುಧಾರಣೆಯಾಗಿದೆ. ಆದರೆ ಅರೆಕಲ್ಲು ಪ್ರದೇಶದಲ್ಲಿ ನೀರಿನ ಕೊರ ತೆಯಿದ್ದರೂ ಗುಡ್ಡ ಪ್ರದೇಶವಾದ್ದರಿಂದ ಇಲ್ಲಿಗೆ ಪೈಪ್‌ ಲೈನ್‌ ಮೂಲಕ ನೀರಿನ ಪೂರೈಕೆ ಸಾಧ್ಯವಾಗಿಲ್ಲ. 

ಪೈಪ್‌ ಒಡೆದು ಸಮಸ್ಯೆ
ಡ್ಯಾಂನಿಂದ ಬಂದ ಪೈಪ್‌ ಗಳು ಒಡೆದುಹೋಗಿ ಸಮಸ್ಯೆ ಯಾಗಿದೆ. ಡ್ಯಾಂನ ನೀರು ಇಲ್ಲದಿದ್ದಾಗ ಕೊಳವೆ
ಬಾವಿಯ ನೀರು ಪೂರೈಕೆ ಮಾಡಲಾಗುತ್ತದೆ. ಒಂದು ಕೊಳವೆ ಬಾವಿಯ ನೀರು ಸ್ವಲ್ಪ ಕಲುಷಿತವಾಗಿದೆ. ಕೆಲವರು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಇದರಿಂದ ನೀರು ಹೆಚ್ಚು ಪ್ರಮಾಣದಲ್ಲಿ ಬೇಕಾಗುತ್ತದೆ.
– ಸುರೇಂದ್ರ ಪೆರ್ಗಡೆ,
ಗ್ರಾಮ ಪಂಚಾಯತ್‌ ಸದಸ್ಯ

ಎರಡು ದಿನಕ್ಕೊಮ್ಮೆ ನೀರು
ವಾರ್ಡ್ ವ್ಯಾಪ್ತಿಯಲ್ಲಿ 450 ಅಡಿ ಆಳದಲ್ಲಿ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿದೆ. ಇಲ್ಲಿರುವ ಶುದ್ಧ ನೀರಿನ ಘಟಕಕ್ಕೆ ಹಾನಿ ಮಾಡಲಾಗಿದ್ದು, ಇದರಿಂದ ನೀರು ಸರಬರಾಜು ನಡೆಯುತ್ತಿಲ್ಲ. ಶಾಂತಿಗುಡ್ಡೆ ಪ್ರದೇಶದಲ್ಲಿ 2 ದಿನಕ್ಕೊಮ್ಮೆ ಅಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಇಲ್ಲಿರುವ 50 ಮನೆಗಳಿಗೆ ನೀರಿನ ಸಮಸ್ಯೆಇದೆ. ಟ್ಯಾಂಕ್‌ ಮೂಲಕ ಸರಬರಾಜು ಮಾಡಿದರೆ ನೀರಿನ ಸಮಸ್ಯೆಯಾಗುವುದಿಲ್ಲ.
-ಜಯಂತಿ, ಸ್ಥಳೀಯರು

ಅರ್ಧಗಂಟೆ ಮಾತ್ರ ನೀರು
ಶಾಂತಿ ಗುಡ್ಡೆಯ 110 ಮನೆಗಳಿಗೆ ನೀರಿನ ಸಮಸ್ಯೆ ಇದೆ. ಮಳೆಗಾಲದಲ್ಲಿ ಮಾತ್ರ ಕೊಳವೆಬಾವಿಯಲ್ಲಿ ನೀರು ಬರುತ್ತಿತ್ತು. ಈಗ ಬರುತ್ತಿಲ್ಲ. ಕೆಲವು ಎತ್ತರ ಪ್ರದೇಶವಾಗಿದೆ. ಟ್ಯಾಂಕಿಯಿಂದ ನೀರು ಬಿಟ್ಟರೆ ಎಲ್ಲರಿಗೂ ಸಿಗು ತ್ತದೆ. 2 ದಿನಕ್ಕೊಮ್ಮೆ ನೀರು ಬಿಡುತ್ತಾರೆ.ಅದೂ ಅರ್ಧಗಂಟೆ ಮಾತ್ರ. ಮಳವೂರು ಡ್ಯಾಂನಿಂದ ಬಂದ ನೀರು ಬಿಡುವುದಿಲ್ಲ.
– ಸಂಶುದ್ದೀನ್‌, ಸ್ಥಳೀಯರು

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next