Advertisement

Politics: ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ರಾಜೀನಾಮೆ ಕೊಡುವುದು:ಆರಗ

04:37 PM Oct 01, 2024 | Kavyashree |

ತೀರ್ಥಹಳ್ಳಿ: ಈ ಬಗ್ಗೆ ನಾನು ನಿನ್ನೆ ರಾತ್ರಿ ನಿಮ್ಮ ಮಾಧ್ಯಮದಲ್ಲೇ ನೋಡುತ್ತಿದ್ದೆ. 14 ಸೈಟ್ ಗಳನ್ನು ನಾನು ಹಿಂತಿರುಗಿಸುತ್ತೇನೆಂದು ಪತ್ರ ಬರೆದಿದ್ದಾರೆ. ವಿಚಾರಣೆಯನ್ನು ಎದುರಿಸಲು ನಾನು ಸಿದ್ದ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಾ ಬರುತ್ತಿದ್ದರು. ಇದುವರೆಗೂ ಯಾಕೆ ಹೋರಾಟ ಮಾಡಿದ್ದರು ಎಂದು ಗೊತ್ತಿಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಆ. 1ರ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ಸಿಎಂ ಪತ್ನಿ ಮೂಡಸೈಟ್ ಹಿಂದಿರುಗಿಸಿದ ವಿಚಾರ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಅಪರಾಧಿ ಎಂದು ರಾಜ್ಯಪಾಲರು ಹೇಳಿಲ್ಲ. ನಿಮ್ಮ ಮೇಲೆ ತನಿಖೆ ಆಗಲಿ ಎಂದು ಒಪ್ಪಿಗೆ ನೀಡಿದ್ದರು.ರಾಜ್ಯಪಾಲರ ಸ್ಥಾನ ಒಂದು ಸಂವಿಧಾನದದತ್ತ ಪೀಠ. ಅಂತವರಿಗೆ ಪ್ರತಿಭಟನೆ ಮಾಡಿ ಚಪ್ಪಲಿ ಹಾರ ಹಾಕುವಂತಹ ಕೆಲಸಗಳನ್ನು ಮಾಡಿದ್ದರು. ಹಳ್ಳಿ ಹಳ್ಳಿಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ. ಕಾನೂನು ಸಂವಿಧಾನ ನಮಗೆ ಯಾವುದು ಅಪ್ಲೈ ಆಗುವುದಿಲ್ಲ ಎಂಬ ದೌರ್ಜನ್ಯದಿಂದ ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರು.

ಕಾನೂನು ಸಂವಿಧಾನ ಎಲ್ಲವೂ ಬೇರೆಯವರಿಗೆ ಎಂದು ಭಾವಿಸಿದ್ದಾರೆ. ಆದರೆ ಸೆ.30ರ ಸೋಮವಾರ ಅವರು ನಾವು ತಪ್ಪು ಮಾಡಿದ್ದೇವೆ ಎಂದು ಶರಣಾಗತಿ ಆದಂತೆ ಕಾಣುತ್ತಿದೆ. ಈ ಕೆಲಸವನ್ನು ಮೊದಲೇ ಮಾಡಬಹುದಿತ್ತಲ್ಲ. ನನ್ನ 40 ವರ್ಷದ ಅನುಭವದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಕಪ್ಪು ಚುಕ್ಕೆ ಇಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಯಾಕೆ ಹೀಗೆ ಆಗಿ ಹೋದರು ಎಂದು ಹೇಳಿದರು.

ನಾನು ಘರ್ಜನೆ ಮಾಡಿದರೆ ನಡೆಯುತ್ತದೆ. ನಾನು ನೂರು ಸಾರಿ ಸುಳ್ಳು ಹೇಳಿದರೆ ಅದು ಸತ್ಯ ಆಗುತ್ತದೆ ಎಂಬ ಎಂಬ ಭಾವನೆ ಅವರಲ್ಲಿತ್ತು. ಈಗ ಅವರು ಒಪ್ಪಿಕೊಂಡಿದ್ದವರದಿಂದ ಅವರ ತಪ್ಪು ಹೊರಗೆ ಬಂದಿದೆ ಹಾಗೂ ಅವರ ತಪ್ಪು ಒಪ್ಪಿಕೊಂಡಂತಾಗಿದೆ. ಅವರು ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ಅವರು ರಾಜೀನಾಮೆ ಕೊಡುವುದು. ಅದು ಶಿಕ್ಷೆ ಅಲ್ಲ, ಒಬ್ಬ ಅಪರಾಧಿ ಆ ಸ್ಥಾನದಲ್ಲಿ ನಿಂತು ರಾಜ್ಯಭಾರ ಮಾಡಬಾರದು ಎಂಬುದು ನಮ್ಮ ಅಭಿಪ್ರಾಯ ಎಂದರು.

ಎಲೆಕ್ಷನ್ ಬಾಂಡ್ ವಿಚಾರವಾಗಿ ಮಾತನಾಡಿ, ಪಾರ್ಟಿ ಫಂಡ್ ಗೆ ಹಣ ತೆಗೆದುಕೊಳ್ಳುವುದು ಎಲ್ಲಾ ಪಕ್ಷಗಳು ತೆಗೆದುಕೊಂಡಿವೆ. ಕಾಂಗ್ರೆಸ್ ಅವರು ಕೂಡ ತೆಗೆದುಕೊಂಡಿದ್ದಾರೆ. ಹಾಗಾದ್ರೆ ಎಲ್ಲರೂ ರಾಜೀನಾಮೆ ಕೊಡಬೇಕು, ರಾಹುಲ್ ಗಾಂಧಿ, ಖರ್ಗೆ ಅವರು ಎಲ್ಲರೂ ಕೊಡಬೇಕು. ಮೂಡ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದಕ್ಕಾಗಿ ಈ ರೀತಿ ಹುಡುಕಿ ಎಫ್ಐಆರ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಒಂದು ದುರಂತ, ಎಲ್ಲ ಜನರಿಗೂ ಈ ವಿಚಾರ ಗೊತ್ತಾಗುತ್ತಿದೆ. ಬೇರೆ ಅವರಿಗೆ ಬೆರಳು ತೋರಿಸುವ ಮುನ್ನ ನಾನೇನು ಮಾಡಿದ್ದೇನೆ ಎಂಬುದನ್ನು ಯೋಚಿಸಬೇಕು ಎಂದ ಅವರು, ಮೊದಲು ನೀವು ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next