Advertisement
ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆಮತದಾನ-ಮತ ಎಣಿಕೆ ನಡೆದು ಈಗಾಗಲೇ ಐದುತಿಂಗಳು ಕಳೆದಿವೆ. ಕೋವಿಡ್ ಸೋಂಕು ಸೇರಿ ಹಲವುಕಾರಣಗಳಿಂದ ಮೇಯರ್-ಉಪಮೇಯರ್‌ಆಯ್ಕೆ ಚುನಾವಣೆಯನ್ನು ಮುಂದೂಡಿದ್ದ ರಾಜ್ಯಸರ್ಕಾರ, ಈಚೆಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ,ಕಲುºರ್ಗಿ ಮಹಾನಗರ ಪಾಲಿಕೆಗಳಿಗೂ ಚುನಾವಣೆನಡೆದ ಹಿನ್ನೆಲೆಯಲ್ಲಿ ಎಲ್ಲ ಪಾಲಿಕೆಗಳಿಗೂ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆ ನಡೆಸಲು ಈಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಸಭೆ: ಬಳ್ಳಾರಿ ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ಕೆಪಿಸಿಸಿಕಚೇರಿಯಲ್ಲಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ನೇತೃತ್ವದಲ್ಲಿ ಶನಿವಾರ ಸಭೆ ನಡೆದಿದ್ದು, ಸಭೆಯಲ್ಲಿಕಾರ್ಯಧ್ಯಕ್ಷರಾದ ಈಶ್ವರಖಂಡ್ರೆ, ಸಲೀಂಅಹಮ್ಮದ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭೆ ಸದಸ್ಯಡಾ| ಸೈಯದ್ ನಾಸೀರ್ ಹುಸೇನ್, ಗ್ರಾಮೀಣಶಾಸಕ ಬಿ. ನಾಗೇಂದ್ರ, ಮಾಜಿ ಸಂಸದ ಉಗ್ರಪ್ಪ,ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಹಮ್ಮದ್‌ರಫೀಕ್ ಸೇರಿ ಹಾಲಿ ಸದಸ್ಯರು, ಪರಾಜಿತಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮೇಯರ್-ಉಪಮೇಯರ್ ಆಯ್ಕೆಗೆಚುನಾವಣೆ ಘೋಷಣೆಯಾಗಿಲ್ಲ. ದಿನಾಂಕ ನಿಗದಿಯಾಗಿಲ್ಲ. ಈ ನಡುವೆ ಆಕಾಂಕ್ಷಿಗಳಲ್ಲಿಪೈಪೋಟಿ ಏರ್ಪಟ್ಟು ಗೊಂದಲಕ್ಕೀಡಾಗುವುದುಬೇಡ. ಚುನಾವಣೆ ಘೋಷಣೆಯಾದಾಕ್ಷಣ ಕೆಪಿಸಿಸಿವತಿಯಿಂದಲೇ ವೀಕ್ಷಕರನ್ನು ನೇಮಿಸಲಾಗುವುದು.ಅವರು ಬಳ್ಳಾರಿಗೆ ಬಂದು ಹಾಲಿ ಸದಸ್ಯರು,ವಿಧಾನ ಪರಿಷತ್ ಸದಸ್ಯರು, ಶಾಸಕರು, ಪರಾಜಿತಅಭ್ಯರ್ಥಿಗಳು, ಹಿರಿಯ ಮುಖಂಡರು ಸೇರಿ ಪಕ್ಷದಎಲ್ಲ ಕಾರ್ಯಕರ್ತರನ್ನು ಸಂಪರ್ಕಿಸಿ ಅಭಿಪ್ರಾಯಸಂಗ್ರಹಿಸಲಿದ್ದಾರೆ. ಬಳಿಕ ವೀಕ್ಷಕರು ನೀಡುವ ವರದಿಆಧರಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಚುನಾವಣೆಯಂದು ಹೆಸರುಗಳನ್ನು ಬಹಿರಂಗಪಡಿಸಲಿದ್ದು, ಸೂಚಿಸಿದ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲಿದ್ದಾರೆ ಎಂಬುದು ಸೇರಿ ಇನ್ನಿತರೆ ವಿಷಯಗಳಕುರಿತು ಸಭೆಯಲ್ಲಿ ಚರ್ಚೆಯಾಗಿವೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
Related Articles
Advertisement
ವೆಂಕೋಬಿ ಸಂಗನಕಲ್ಲು