ಹೊಸದಿಲ್ಲಿ: ಪೊಲೀಸ್ ಇಲಾಖೆಯ ಕಾರಿನಲ್ಲಿ ವ್ಯಕ್ತಿಯೊಬ್ಬ ಸಾಹಸ ಪ್ರದರ್ಶಿಸಿದ ವಿಡಿಯೋ ಕುರಿತು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ವಿಡಿಯೋದಲ್ಲಿ ಕಂಡು ಬಂದಿರುವ ಕಾರನ್ನು ಖಾಸಗಿ ಗುತ್ತಿಗೆ ದಾರನಿಂದ ಇಲಾಖೆಯ ಸೇವೆಗಾಗಿ ಬಾಡಿಗೆ ಪಡೆಯಲಾಗಿದ್ದು, ಸಾಹಸ ಪ್ರದರ್ಶಿಸಿದ ವ್ಯಕ್ತಿ ಪೊಲೀಸ್ ಸಿಬಂದಿಯಲ್ಲ ಎಂದು ಸ್ಪಷ್ಟನೆ ನೀಡಿದೆ.
ಶರ್ಟ್ ಧರಿಸದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನ ಮೇಲೆ ಸಾಹಸ ಪ್ರದರ್ಶಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಪೊಲೀಸ್ ಇಲಾಖೆಯೇ ವಾಹನವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಬಂದಿತ್ತು, ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ಗುರಿಯಾಗಿತ್ತು.
ಸಾಹಸ ಪದರ್ಶಿಸಿದ ವ್ಯಕ್ತಿ ಕಾರಿನ ಡ್ರೈವರ್‌ನ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆದಾರನಿಗೆ ಕಾರನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಅಗತ್ಯ ಕಾನೂನು ಕ್ರಮವನ್ನೂ ಜರಗಿಸುವುದಾಗಿ ಹೇಳಿದೆ.
ಈ ವಿಡಿಯೋ ಕೆಲ ದಿನಗಳ ಹಿಂದೆ ಚಿತ್ರೀಕರಣವಾಗಿತ್ತು ಎಂದು ಪೊಲೀಸ್ ಇಲಾಖೆ ಹೇಳಿದೆ.