Advertisement

ಅತ್ಯಾಚಾರ ತನಿಖೆಗೆ ಕಿಟ್‌

10:46 AM Sep 24, 2018 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಇರುವ ಠಾಣೆಗಳಿಗೆ ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ವಿಶೇಷ ಕಿಟ್‌ ನೀಡಲಾಗುತ್ತದೆ. ಇದು ವೀರ್ಯ, ರಕ್ತದ ಮಾದರಿ ಸೇರಿದಂತೆ ಇತರ ಸಾಕ್ಷ್ಯಗಳ ಸಂಗ್ರಹಕ್ಕೆ ನೆರವಾಗಲಿದೆ. ಲೈಂಗಿಕ ಹಲ್ಲೆ ಸಾಕ್ಷ್ಯ ಸಂಗ್ರಹಿಸುವ ಕಿಟ್‌ (ಎಸ್‌ಎಇಸಿಕೆ) ಎಂದು ಅದಕ್ಕೆ ಹೆಸರು ಸೂಚಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಆರಂಭಿಕ ಹಂತದಲ್ಲಿ 3,960 ಕಿಟ್‌ಗಳನ್ನು ಖರೀದಿಸಲು ಮುಂದಾಗಿದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ 100 ಕಿಟ್‌ಗಳನ್ನು ನೀಡಲಾಗುತ್ತದೆ. ಕಿಟ್‌ಗಳಿಗಾಗಿ ಮೊದಲ ಹಂತದಲ್ಲಿ 79.20 ಕೋಟಿ ರೂ. ಮತ್ತು ತರಬೇತಿಗಾಗಿ 4.91 ಕೋಟಿ ರೂ. ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next