Advertisement

ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಜಾತ್ರೆ: ಚೆಂಡು ಉತ್ಸವ ಸಂಪನ್ನ

06:42 PM Apr 12, 2019 | mahesh |

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ನಡೆದ ಐದು ದಿನಗಳ ಚೆಂಡು ಉತ್ಸವ ಸಂಪನ್ನಗೊಂಡಿದೆ. ದೇವಸ್ಥಾನದ ಸಮೀಪದ ವಿಶಾಲ ಗದ್ದೆಯಲ್ಲಿ ಐದು ದಿನಗಳವರೆಗೆ ಚೆಂಡು ಉತ್ಸವ ನಡೆದಿದ್ದು, ನೂರಾರು ಮಂದಿ ಉತ್ಸಾಹಿ ತರುಣರು ಪಾಲ್ಗೊಂಡಿದ್ದರು.

Advertisement

ಅಮ್ಮುಂಜೆ ಹಾಗೂ ಮಣೇಲ್‌(ಮಳಲಿ) ಊರುಗಳ ಮಧ್ಯೆ ಪರಂಪರಾಗತವಾಗಿ ಚೆಂಡಾಟ ನಡೆಯುತ್ತ ಬಂದಿದೆ. ಚೆಂಡಾಟ ನಡೆದ ಬಳಿಕ ಉತ್ಸವ ಬಲಿ ನಡೆಯುತ್ತಿದ್ದು, ಇದಾದ ಬಳಿಕ ಆಯಾ ದಿನಗಳ ಚೆಂಡಿನ ದಿವಸ ಆಯಾ ರಥೋತ್ಸವ ಜರಗಿತು. ಕಡೇ ಚೆಂಡಿನ ದಿನ ಆಳುಪಲ್ಲಕಿ ರಥ, ಬೆಳ್ಳಿರಥೋತ್ಸವ ಜರಗಿತು. ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ವಸಂತ ಮಂಟಪದಲ್ಲಿರಿಸಿ ಪೂಜೆ ನಡೆಸಿ, ಬಳಿಕ ಪಲ್ಲಕಿಸೇವೆ, ಧಾರ್ಮಿಕ ಕಾರ್ಯಗಳು ಜರಗಿದವು.

ರಥೋತ್ಸವ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸಪೂಜೆ ನೆರವೇರಿತು. ದೇಗುಲದ ತಂತ್ರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ಅನಂತರ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ ನೆರವೇರಿತು. ಅನಂತರ ರಥೋತ್ಸವ ಜರಗಿತು.

ಅಲ್ಬಂ ಸಾಂಗ್‌ ಬಿಡುಗಡೆ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ನಿಮಿತ್ತ ಬುಧವಾರ “ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಎಂಬ ಅಲ್ಬಂ ಸಾಂಗ್‌ ಅನ್ನು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಬಿಡುಗಡೆಗೊಳಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿದರು.

ಸ್ವಾಮಿ ಪ್ರಣವಾನಂದ ಸರಸ್ವತಿ, ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಾರಾನಾಥ ಆಳ್ವ ಉಳಿಪ್ಪಾಡಿಗುತ್ತು, ಪ್ರವೀಣ್‌, ಹರೀಶ್ಚಂದ್ರ, ಅರ್ಚಕ ರಾಮ್‌ ಭಟ್‌, ಪೊಳಲಿ ಗಿರೀಶ್‌ ತಂತ್ರಿ, ಲೀಲಾಕ್ಷ ಕರ್ಕೇರ, ಕದ್ರಿ ನವನೀತ್‌ ಶೆಟ್ಟಿ, ವೆಂಕಟೇಶ್‌ ನಾವಡ, ಭಾಸ್ಕರ ಭಟ್‌, ಕೃಷ್ಣಾನಂದ ಹೊಳ್ಳ, ರಿತೇಶ್‌, ಅಮ್ಮುಂಜೆ ಗುತ್ತು ದೇವ್‌ದಾಸ್‌ ಹೆಗ್ಡೆ, ರಂಗನಾಥ ಶೆಟ್ಟಿ, ಸುಬ್ರಾಯ ಕಾರಂತ್‌, ಪ್ರಶಾಂತ್‌ ಗುರುಪುರ, ಭರತ್‌ ಗುರುಪುರ ಹಾಗೂ ವಾಮನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್‌ ರಾಯಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next