Advertisement

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

01:06 AM Jun 25, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಸ್ಪೀಕರ್‌ ಆಯ್ಕೆ ಜೂ. 26ರಂದು ನಡೆಯಲಿದ್ದು, ಜೂ. 25ರಂದು ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದೆ. ಈ ಮಧ್ಯೆ ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ವಿಪಕ್ಷಕ್ಕೆ ನೀಡದಿದ್ದರೆ ಸ್ಪೀಕರ್‌ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್‌ ಹೇಳಿದೆ.

Advertisement

ಹಾಗೇನಾದರೂ ಆದರೆ ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್‌ ಆಯ್ಕೆ ಚುನಾವಣೆ ಮೂಲಕ ನಡೆಯಲಿದೆ. ಆದರೆ ಮೂಲಗಳ ಪ್ರಕಾರ ಬಿಜೆಪಿಯು ಡೆಪ್ಯುಟಿ ಸ್ಪೀಕರ್‌ ಸ್ಥಾನವನ್ನು ಎನ್‌ಡಿಎ ಮಿತ್ರ ಪಕ್ಷಗಳಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ. ಸ್ಪೀಕರ್‌ ಹುದ್ದೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಲಿದೆ.

ಈಗ ಹಂಗಾಮಿ ಸ್ಪೀಕರ್‌ ಆಗಿರುವ ಭತೃìಹರಿ ಮಹ್ತಾಬ್‌, 17ನೇ ಲೋಕಸಭೆಯಲ್ಲಿ ಸ್ಪೀಕರ್‌ ಆಗಿದ್ದ ಓಂ ಬಿರ್ಲಾ, ಆಂಧ್ರ ಬಿಜೆಪಿ ನಾಯಕಿ ಡಿ. ಪುರಂದೇಶ್ವರಿ ಹಾಗೂ ರಾಧಾ ಮೋಹನ್‌ ಸಿಂಗ್‌ ಅವರು ಸ್ಪೀಕರ್‌ ಸ್ಪರ್ಧೆಗೆ ಮುಂಚೂಣಿಯಲ್ಲಿದ್ದಾರೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸ್ಥಾನಗಳೊಂದಿಗೆ ಪೂರ್ಣ ಬಹುಮತ ಹೊಂದಿದ್ದರೆ ಐಎನ್‌ಡಿಐಎ ಒಕ್ಕೂಟವು 234 ಸದಸ್ಯರನ್ನು ಹೊಂದಿದೆ.

ಮಿತ್ರಪಕ್ಷಗಳ ಜತೆ ಬಿಜೆಪಿ ಚರ್ಚೆ
ಲೋಕಸಭಾ ಸ್ಪೀಕರ್‌ ಆಯ್ಕೆ ಸಂಬಂಧ ಬಿಜೆಪಿ ತನ್ನ ಮಿತ್ರ ಪಕ್ಷಗಳ ಜತೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸ್ಪೀಕರ್‌ ಆಯ್ಕೆ ಸಂಬಂಧ ಟಿಡಿಪಿ ಅಧ್ಯಕ್ಷ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಕೆ. ರಾಮಮೋಹನ್‌ ನಾಯ್ಡು ಹೇಳಿದ್ದಾರೆ.

Advertisement

ವಿಪಕ್ಷ ಸ್ಪರ್ಧೆ
ಲೋಕಸಭೆ ಸ್ಪೀಕರ್‌ ಆಯ್ಕೆ ಸಂಬಂಧ ಸರಕಾರವು ವಿಪಕ್ಷಗಳ ಜತೆಗೆ ಒಮ್ಮತವನ್ನು ಸಾಧಿಸದಿದ್ದರೆ ವಿಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಐಎನ್‌ಡಿಐಎ ಒಕ್ಕೂಟದ ಪಾಲುದಾರ ರೆವಲೂಶನರಿ ಸೋಷಿಯಲಿಸ್ಟ್‌ ಪಾರ್ಟಿ (ಆರ್‌ಎಸ್‌ಪಿ) ಸಂಸದ ಎನ್‌.ಕೆ. ಪ್ರೇಮಚಂದ್ರನ್‌ ಹೇಳಿದ್ದಾರೆ.

ಮೊದಲ ದಿನವೇ
ಬಿಜೆಪಿ-ವಿಪಕ್ಷ ಕದನ
18ನೇ ಲೋಕಸಭಾ ಅಧಿವೇಶನದ ಮೊದಲ ದಿನವೇ ಬಿಜೆಪಿ-ಐಎನ್‌ಡಿಐಎ ಮಿತ್ರಕೂಟದ ನಡುವೆ ಕದನ ನಡೆದಿದೆ. ಕಲಾಪ ಆರಂಭಕ್ಕೆ ಮುನ್ನ ಮೋದಿಯವರು ದೇಶಕ್ಕೆ ಬೇಕಿರುವುದು ಒಳ್ಳೆಯ ವಿಪಕ್ಷ ಎಂದರೆ, ಮೋದಿ ಪ್ರಮಾಣವಚನದ ವೇಳೆ ಕಾಂಗ್ರೆಸ್‌ ಸಂಸದರು ಸಂವಿಧಾನದ ಪ್ರತಿ ತೋರಿಸಿ ವ್ಯಂಗ್ಯವಾಡಿದರು.

ರಾಜ್ಯದ 21 ಮಂದಿ ಕನ್ನಡದಲ್ಲಿ ,
ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣ
ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ಕರಾವಳಿಯ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಬ್ರಿಜೇಶ್‌ ಚೌಟ ಸೇರಿ ಕರ್ನಾಟಕದ 22 ಮಂದಿ ಲೋಕಸಭಾ ಸಂಸದರಾಗಿ ಸೋಮವಾರ ಪ್ರಮಾಣ ಸ್ವೀಕರಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next