Advertisement

ಇಂದು ಸಂಜೆ 4ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ: ದೇಶದ ಚಿತ್ತ ಪ್ರಧಾನಿ ಮಾತಿನತ್ತ!

01:28 PM Jun 30, 2020 | Mithun PG |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4 ಗಂಟೆಗೆ  (30-6-2020) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. ಇದರಿಂದ ದೇಶದ ಚಿತ್ತ ಇದೀಗ ಪ್ರಧಾನಿಯತ್ತ ಮಾತಿನತ್ತ ನೆಟ್ಟಿದೆ.

Advertisement

ಕೇಂದ್ರವು ಸರಕಾರ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಕೆಲವೇ ನಿಮಿಷಗಳಲ್ಲಿ ಮತ್ತು ಅನ್ ಲಾಕ್  2.0 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.

ಪ್ರಮುಖವಾಗಿ ಇಂದು ಕೇಂದ್ರ ಗೃಹ ಸಚಿವಾಲಯ ನೀಡಿದ ಅನ್ ಲಾಕ್  2 ಹೊಸ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪಿಎಂ ಮೋದಿ ಜನರಿಗೆ ತಿಳಿಹೇಳುವ ಸಾಧ್ಯತೆ ಇದೆ. ಮಾತ್ರವಲ್ಲದೆ ಲಾಕ್ ಡೌನ್ ಮಧ್ಯೆ ಜನರಿಗೆ ಸರ್ಕಾರದ ಉಪಕ್ರಮಗಳ ಕುರಿತಾಗಿಯೂ ಮಾಹಿತಿ ನೀಡುವ ಅವಕಾಶವಿದೆ. ಭಾರತ- ಚೀನಾ ಗಡಿ ಸಂಘರ್ಷ ಮತ್ತು  ಉದ್ವಿಗ್ನತೆ ಕುರಿತು ಮಾತನಾಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಭಾನುವಾರ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ, ಜೊತೆಗೆ ಸೋಂಕಿತರ ಚೇತರಿಕೆ ಪ್ರಮಾಣವೂ ಹೆಚ್ಚಿದೆ ಎಂದು ತಿಳಿಸಿದ್ದರು.

Advertisement

ಭಾರತೀಯ ಭೂಪ್ರದೇಶವನ್ನು ಅಪೇಕ್ಷಿಸುವವರಿಗೆ ಭಾರತೀಯ ಸೈನಿಕರು ಸೂಕ್ತ ಉತ್ತರ ನೀಡಿದ್ದಾರೆ. ಜೂನ್ 15ರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ  ಮೋದಿ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದ್ದರು.

ಕೋವಿಡ್ ಆರಂಭದ ಕಾಲ ಅಂದರೇ ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾರ್ಚ್ 22 ರ ಭಾನುವಾರ  ಜನತಾ ಕರ್ಫ್ಯೂ ಘೋಷಿಸಿದರು. ಮಾರ್ಚ್ 24 ರಿಂದ 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು. ಏಪ್ರಿಲ್ 14 ರಂದು ಅವರು ಲಾಕ್ ಡೌನ್ ಅವಧಿಯನ್ನು ಮೇ 3 ರವರೆಗೆ ವಿಸ್ತರಿಸಿದರು.

ಏಪ್ರಿಲ್ 3 ರಂದು ಮತ್ತೆ ಜನರನ್ನು ಉದ್ದೇಶಿ ಮಾತನಾಡಿ ಏಪ್ರಿಲ್ 5 ರಂದು ಕೋವಿಡ್  ಯೋಧರಿಗೆ ದೀಪಗಳನ್ನು ಬೆಳಗಿಸಲು ಕರೆ ನೀಡಿದರು. ನಂತರದಲ್ಲಿ ಲಾಕ್‌ ಡೌನ್ ಅನ್ನು ಗೃಹ ಸಚಿವಾಲಯ ಮೇ 17 ರವರೆಗೆ ವಿಸ್ತರಿಸಿತು. ತದನಂತರ ಅನ್ ಲಾಕ್ ಪ್ರಕ್ರೀಯೆ ಆರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next