Advertisement

External Affairs: ಭಾರತದಲ್ಲಿ ಅಸ್ಥಿರತೆ ಸೃಷ್ಟಿಗೆ ಅಮೆರಿಕ ಪ್ರಯತ್ನ: ಬಿಜೆಪಿ

02:56 AM Dec 07, 2024 | Team Udayavani |

ಹೊಸದಿಲ್ಲಿ: ” ಅಮೆರಿಕದ ವಿದೇಶಾಂಗ ಸಚಿವಾಲಯ ಭಾರತವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಅಮೆರಿಕ ಕಾರ್ಯವೆಸಗುತ್ತಿದೆ’. ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ. ಇದೇ ಮೊದಲ ಬಾರಿಗೆ ಅಮೆ ರಿಕದ ವಿರುದ್ಧ ಬಹಿರಂಗವಾಗಿ ಬಿಜೆಪಿ ವಕ್ತಾರರೊಬ್ಬರು ಆಕ್ರೋಶ ವ್ಯಕ್ತಪಡಿ ಸಿದ್ದು ಮಹತ್ವ ಪಡೆದಿದೆ.

Advertisement

ದಿಲ್ಲಿಯಲ್ಲಿ ಮಾತನಾಡಿದ ಅವರು ಅಮೆರಿಕದ ವಿದೇಶಾಂಗ ಸಚಿವಾಲಯ ಕೆಲವೊಂದು ಪತ್ರಕರ್ತರು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯ ವರ ಜತೆ ಸೇರಿಕೊಂಡು ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

ಆರ್ಗನೈಸ್ಡ್ ಕ್ರೈಮ್‌ ಆ್ಯಂಡ್‌ ಕರಪ್ಶನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್ (ಒಸಿಸಿಆರ್‌ಪಿ)ಗೆ ಲಭಿಸುವ ಒಟ್ಟು ಧನ ಸಹಾಯದ ಶೇ.50 ಪ್ರಮಾಣ ಅಮೆರಿಕದ ವಿದೇಶಾಂಗ ಇಲಾ ಖೆ ಯಿಂದ ಪ್ರಾಪ್ತವಾಗುತ್ತಿದೆ. ಜತೆಗೆ ರಹಸ್ಯವಾಗಿ ಕಾರ್ಯವೆಸಗುತ್ತಿರುವ ಪ್ರಭಾವ ಶಾಲಿ ಗುಂಪಿಗೆ ಅಮೆರಿಕ ನೆರವು ನೀಡುತ್ತಿದೆ ಎಂದು ಪಾತ್ರಾ ದೂರಿದ್ದಾರೆ. ಪ್ರಧಾನಿ ಮೋದಿ, ಗೌತಮ್‌ ಅದಾನಿ ವರ್ಚಸ್ಸಿಗೆ ಧಕ್ಕೆ ತರಲು ರಾಹುಲ್‌ ಯತ್ನಿಸುತ್ತಿದ್ದಾರೆ ಎಂದೂ ಆರೋಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next