Advertisement

2,000 ರೂ. ನೋಟುಗಳ ನಿಷೇಧಕ್ಕೆ ನಾಯ್ಡು ಆಗ್ರಹ

10:21 AM Sep 27, 2017 | |

ಹೊಸದಿಲ್ಲಿ: ನೋಟು ಅಮಾನ್ಯ ಕ್ರಮದ ಅನಂತರ ಚಲಾವಣೆಗೆ ತಂದಿರುವ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸ ಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಆಗ್ರಹಿಸಿದ್ದಾರೆ.

Advertisement

ನೋಟು ಅಮಾನ್ಯಕ್ಕೆ ಸಂಬಂಧಿಸಿದ ಪ್ರಧಾನ ಮಂತ್ರಿಗಳ ಸಮಿತಿಯ ಮುಖ್ಯಸ್ಥರಾಗಿದ್ದ ನಾಯ್ಡು ಆಂಗ್ಲ ಸುದ್ದಿ ವಾಹಿನಿ ಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, “ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ತಲೆದೋರಬಹುದಾಗಿದ್ದ ನಗದಿನ ಬಿಕ್ಕಟ್ಟು ಪರಿಹರಿಸಲು ಆಗ 2,000 ಮುಖಬೆಲೆಯ ನೋಟುಗಳನ್ನು ಪರಿಚಯಿಸ ಲೇಬೇಕಿತ್ತು. ಆದರೆ ಈಗ ಆ ನೋಟುಗಳಿಂದ ಸಾಕಷ್ಟು ತೊಂದರೆ ಎದುರಾಗುತ್ತಿರುವ ಕಾರಣ ಅವುಗಳನ್ನು ರದ್ದುಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಹಾಗೇ ಜಿಎಸ್‌ಟಿ ನಿರೀಕ್ಷೆಯಂತೆ ಕೆಲವು ಆರಂಭಿಕ ತೊಡಕುಗಳನ್ನು ಎದುರಿಸುತ್ತಿದೆ. ಸಚಿವ ಜೇಟಿÉ ಜತೆ ಚರ್ಚಿ ಸಿದ್ದು, “ತಿರುಪತಿ ಸಹಿತ ಕೆಲವು ಕ್ಷೇತ್ರಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವಂತೆ ಕೋರಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next