Advertisement

PM Modi, ಅಬುಧಾಬಿ ಯುವರಾಜ ಖಾಲೀದ್‌ ಜತೆ ಹೈದ್ರಾಬಾದ್‌ Houseನಲ್ಲಿ ದ್ವಿಪಕ್ಷೀಯ ಮಾತುಕತೆ  

12:57 PM Sep 09, 2024 | Team Udayavani |

ನವದೆಹಲಿ:‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ (ಸೆ.09) ಅಬುಧಾಬಿ (Abu Dhabi) ಯುವರಾಜ ಶೇಖ್‌ ಖಾಲೀದ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಭಾರತ ಮತ್ತು ಯುಎಇ ನಡುವಿನ ಬಾಂಧವ್ಯ ವೃದ್ಧಿಗಾಗಿ ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

ಅಬು ಧಾಬಿ ಯುವರಾಜ ಶೇಖ್‌ ಖಾಲೀದ್‌ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ (Bilateral Talks) ನಡೆಸಿರುವುದಾಗಿ ವರದಿ ವಿವರಿಸಿದೆ.

ನವದೆಹಲಿಯಲ್ಲಿನ ಹೈದರಾಬಾದ್‌ ಹೌಸ್‌ (Hyderabad House) ನಲ್ಲಿ ಯುವರಾಜ ಶೇಖ್‌ ಖಾಲೀದ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರು, ಆತ್ಮೀಯವಾಗಿ ಸ್ವಾಗತ ಕೋರಿದ್ದು, ಉಭಯ ದೇಶಗಳ ನಡುವಿನ ಭವಿಷ್ಯದ ಬಾಂಧವ್ಯ ಮತ್ತು ಸಹಕಾರದ ಕುರಿತು ಚರ್ಚೆ ನಡೆಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಐತಿಹಾಸಿಕ ಬಾಂಧವ್ಯ:

Advertisement

ಭಾನುವಾರ (ಸೆ.08) ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಯುವರಾಜ ಖಾಲೀದ್‌ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯೆಲ್‌ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇದೊಂದು ಐತಿಹಾಸಿಕ ಸಂಬಂಧವಾಗಿದ್ದು, ಶೇಖ್‌ ಖಾಲೀದ್‌ ಅವರು ಮೊದಲ ಬಾರಿಗೆ ಅಧಿಕೃತವಾಗಿ ಭಾರತಕ್ಕೆ ಭೇಟಿ ನೀಡಿರುವುದಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next