Advertisement
ಈ ಬಗ್ಗೆ ಮಾತಾಡಿರುವ ಅವರು, ಪತ್ರಿಕೆಯೊಂದು ಪುರಾವೆ ಇಲ್ಲದೆ ಊಹಾಪೋಹದ ಸುದ್ದಿಯನ್ನು ಹೇಗೆ ಬಿತ್ತರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಇಂಥ ತಪ್ಪು ಮಾಹಿತಿ ಗಳನ್ನು ಕ್ರಿಮಿನಲ್‌ಗಳು ನಿರಂತರವಾಗಿ ಸೋರಿಕೆ ಮಾಡುತ್ತಿದ್ದಾರೆ. ಘಟನೆಯಲ್ಲಿ ವಿದೇಶಿ ಕೈವಾಡ ಇದೆಯೇ ಎಂಬ ಬಗ್ಗೆ ಕೈಗೊಂಡಿದ್ದ ತನಿಖೆಯೇ ಸುದ್ದಿ ಆಯಿತು ಎಂದು ಕೆನಡಾ ಪ್ರಧಾನಿ ಕಿಡಿಕಾರಿದ್ದಾರೆ.
ನೇರ ದೋಷಾರೋಪಣೆ!
ಹೊಸದಿಲ್ಲಿ: ನಿಜ್ಜರ್ ಹತ್ಯೆ ಪ್ರಕರಣದಲ್ಲಿ 4 ಭಾರ ತೀಯರ ವಿರುದ್ಧ ನೇರ ದೋಷಾರೋಪಣೆ ಹೊರಿ ಸಲು ಕೆನಡಾ ಸರಕಾರ ನಿರ್ಧರಿಸಿದೆ. ಹಾಗಾಗಿ, ಸರ್ರೆ ಪ್ರಾಂತದ ಕೋರ್ಟಲ್ಲಿ ವಿಚಾರಣಪೂರ್ವ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ. ಅದನ್ನು ನೇರ ಸುಪ್ರೀಂ ಕೋರ್ಟ್‌ನಲ್ಲಿಯೇ ವಿಚಾರಣೆ ನಡೆಸಲಾ ಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.