Advertisement
ಆರಂಭದಲ್ಲಿ ಶೇಖ್ ಹಸೀನಾ ಬೇರೆ ದೇಶದಲ್ಲಿ ಆಶ್ರಯ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕಳೆದ ಆಗಸ್ಟ್ 5ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಲವಂತದಿಂದ ದೇಶ ತೊರೆಯುವಂತೆ ಮಾಡಿದ್ದು, ನಂತರ ಹಸೀನಾ ಭಾರತದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದರು.
Related Articles
Advertisement
ಕ್ಷಿಪ್ರ ಕ್ರಾಂತಿಯಲ್ಲಿ ಸೇನಾ ಅಧಿಕಾರಿಗಳ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಶೇಖ್ ಹಸೀನಾ ಮತ್ತು ಸಹೋದರಿ ಶೇಖ್ ರೆಹಾನಾ ಅಂದು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು. 1975ರಿಂದ 1981ರವರೆಗೆ ಹಸೀನಾ, ತನ್ನ ಮಕ್ಕಳು, ಪತಿ ಹಾಗೂ ಸಹೋದರಿ ಜತೆ ಸುಮಾರು ಆರು ವರ್ಷಗಳ ಕಾಲ ಯಾರಿಗೂ ಗುರುತು ಪತ್ತೆಹಚ್ಚದ ರೀತಿಯಲ್ಲಿ ವಾಸವಾಗಿದ್ದರು.
ನಂತರ ಬಾಂಗ್ಲಾದೇಶಕ್ಕೆ ಮರಳಿದ್ದ ಶೇಖ್ ಹಸೀನಾ ರಾಜಕೀಯ ಪಕ್ಷದ ಮುಖ್ಯಸ್ಥರಾಗಿ ಸಾಕಷ್ಟು ಶ್ರಮಪಟ್ಟ ಬಳಿಕ ದೇಶದ ಪ್ರಧಾನಿ ಹುದ್ದೆಗೆ ಏರಿದ್ದರು. ತನ್ನ ಆಪತ್ಕಾಲದಲ್ಲಿ ನೆರವು ನೀಡಿದ ಭಾರತಕ್ಕೆ ಹಸೀನಾ ಅಭಿನಂದನೆ ತಿಳಿಸಿದ್ದರು.
ನಾನು ಎರಡನೇ ಬಾರಿ ಭಾರತದಲ್ಲಿ ರಹಸ್ಯವಾಗಿ ಜೀವನ ಸಾಗಿಸುವ ಕಾಲ ಬರುತ್ತದೆ ಎಂಬುದನ್ನು ಊಹಿಸಿರಲಿಲ್ಲ ಎಂದು ಹಸೀನಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಮೂಲಗಳ ಪ್ರಕಾರ, ಶೇಖ್ ಹಸೀನಾ ಅವರ ಭದ್ರತೆಗಾಗಿ ಎನ್ ಎಸ್ ಜಿ ಕಮಾಂಡೋಸ್ ಗಳನ್ನು ನಿಯೋಜಿಸಲಾಗಿದೆ. ಬಾಹ್ಯವಾಗಿಯೂ ಬಿಗಿ ಭದ್ರತೆ ನೀಡಲಾಗಿದೆ. ಏತನ್ಮಧ್ಯೆ ಭಾರತದಲ್ಲಿರುವ ಹಸೀನಾ ಬ್ರಿಟನ್ ನಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ..