Advertisement

ಮಾಲೆಗೆ ಪ್ರಧಾನಿ ಮೋದಿ ಆಗಮನ; ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

04:41 PM Jun 09, 2019 | Sathish malya |

ಮಾಲೆ : ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಇಂದು ಮಾಲ್ದೀವ್ಸ್‌ ಗೆ ಆಗಮಿಸಿದರು.

Advertisement

ಮಾಲೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದೇಶ ಸಚಿವ ಅಬ್ದುಲ್ಲ ಶಾಹೀದ್‌ ಅವರು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.

ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಮಾಲೆ ಸಂಪೂರ್ಣವಾಗಿ ಮತ್ತು ಅತ್ಯಾಕರ್ಷಕವಾಗಿ ಸಿಂಗರಿಸಲ್ಪಟ್ಟಿದ್ದು ನವವಧುವಿನಂತೆ ಕಾಣುತ್ತಿದೆ; ಎಲ್ಲ ಬೀದಿಗಳಲ್ಲಿ, ಚೌಕಗಳಲ್ಲಿ, ಭಾರತದ ಮತ್ತು ಮಾಲ್‌ದೀವ್ಸ್‌ ಧ್ವಜಗಳು ಹಾರಾಡುತ್ತಿದ್ದು ಪ್ರಧಾನಿ ಮೋದಿ ಮತ್ತು ಅವರ ನಿಯೋಗಕ್ಕೆ ಹಾರ್ದಿಕ ಸ್ವಾಗತ ನೀಡುವಂತಿವೆ ಎಂದು ವರದಿಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರ ಮಾಲ್ದೀವ್ಸ್‌ ಭೇಟಿಯು ಮಾಲೆಯ “ಇಂಡಿಯಾ ಫ‌ಸ್ಟ್‌ ಪಾಲಿಸಿ’ ಗೆ ಅನುಗುಣವಾಗಿ ಮತ್ತು ಹೊಸದಿಲ್ಲಿ “ನೇಬರ್‌ಹುಡ್‌ ಫ‌ಸ್ಟ್‌ ಪಾಲಿಸಿ’ ಗೆ ಅನುಗುಣವಾಗಿ ಇದೆ.

Advertisement

ಎರಡು ದಿನಗಳ ಈ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಮಾಲ್ದೀವ್ಸ್‌ ಭೇಟಿ ಮುಗಿಸಿದ ಬಳಿಕ ಶ್ರೀಲಂಕಾ ಗೆ ತೆರಳಲಿದ್ದಾರೆ.

ಪ್ರಧಾನಿ ಮೋದಿ ಅವರು ಮಾಲ್ದೀವ್ಸ್‌ ಅಧ್ಯಕ್ಷ ಇಬ್ರಾಹಿಂ ಸೋಲಿ ಅವರನ್ನು ಭೇಟಿಯಾಗಲಿದ್ದು ಉಭಯ ನಾಯಕರು ಅಬಕಾರಿ ಸಹಕಾರ, ಸಾಮರ್ಥ್ಯ ವೃದ್ಧಿ, ರಕ್ಷಣೆ ಮತ್ತು ಸಂಪರ್ಕ ಕ್ಷೇತ್ರಗಳಿಗೆ ಸಂಬಂಧಿಸಿ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಈ ಭೇಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮಾಲ್‌ದೀವ್ಸ್‌ನ ಪರಮೋಚ್ಚ ಪೌರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ಮೋದಿ 2018ರ ನವೆಂಬರ್‌ ನಲ್ಲಿ ಮಾಲ್‌ದೀವ್ಸ್‌ ಅಧ್ಯಕ್ಷ ಸೋಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದರು. ಆದರೆ ದ್ವಿಪಕ್ಷೀಯ ಮಟ್ಟದಲ್ಲಿ ಕಳೆದ ಎಂಟು ವರ್ಷಗಳಲ್ಲೇ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next