ಬೆಳ್ತಂಗಡಿ: ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕ ನೆರವು ಪಡೆಯಲು ಕಡ್ಡಾಯವಾಗಿ ನಾಗರಿಕ ಸೇವ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ನಡೆಸುವಂತೆ ಈಗಾಗಲೆ ಸೂಚಿಸಿದೆ. ಇದರ ಅವಧಿಯೂ ಆ. 31ಕ್ಕೆ ಕೊನೆಗೊಳ್ಳಲಿದೆ.
ಕಿಸಾನ್ ಸನ್ಮಾನ್ ಯೋಜನೆಯಡಿ ಆರ್.ಟಿ.ಸಿ. ಹೊಂದಿರುವ ಪ್ರತೀ ರೈತರು ಅಂದರೆ 2019ರ ಫೆಬ್ರವರಿವರೆಗೆ ನೋಂದಾಯಿಸಿಕೊಂಡವರಿಗೆ ರಾಜ್ಯದಿಂದ ಎರಡು ಕಂತುಗಳಲ್ಲಿ 4,000 ರೂ. ಹಾಗೂ ಕೇಂದ್ರದಿಂದ ನಾಲ್ಕು ಕಂತಿನಲ್ಲಿ 6,000 ರೂ. ಸೇರಿ ಒಟ್ಟು 10,000 ರೂ. ಖಾತೆಗೆ ಜಮೆಯಾಗುತ್ತದೆ. ಈ ಲಾಭವನ್ನು ಪಡೆದುಕೊಳ್ಳಲು ಈವರೆಗೆ ದ.ಕ. ಜಿಲ್ಲೆಯಲ್ಲಿ 1,54,754 ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ನೋಂದಾಯಿತ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ಮಾಡದೇ ಹೋದಲ್ಲಿ ಯೋಜನೆಯಿಂದ ವಿಮುಖರಾಗಲಿದ್ದಾರೆ. ಪ್ರಸಕ್ತ ದ.ಕ. ಜಿಲ್ಲೆಯ 1,54,754 ರೈತರಲ್ಲಿ ಆ. 22ರ ವರೆಗೆ 82,001 ಮಂದಿ(ಶೇ. 53)ಯಷ್ಟು ಇ-ಕೆವೈಸಿಗೆ ಆಸಕ್ತಿ ತೋರಿದ್ದಾರೆ. ಉಳಿದಂತೆ 72,753 ಮಂದಿ ಇನ್ನೂ ಇ-ಕೆವೈಸಿ ನಡೆಸಿಲ್ಲ. ಸರಕಾರ ಈ ಕುರಿತು ವ್ಯಾಪಕ ಪ್ರಚಾರ ನಡೆಸಿದರೂ ರೈತರು ನಿರಾಸಕ್ತಿ ತೋರಿರುವ ಕುರಿತು ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಕಡಬ ಅತೀ ಕಡಿಮೆ 531, ಮೂಡುಬಿದಿರೆ 304 ರೈತರಷ್ಟೆ ನೋಂದಾಯಿಸಿಕೊಂಡಿದ್ದರು.
ನಿರಾಸಕ್ತಿಗೆ ಕಾರಣವಿದೆ
ಆರ್ಥಿಕ ಪರಿಹಾರವು ಕೋವಿಡ್ ಅವಧಿಯಲ್ಲಿ ವಿಳಂಬವಾಗಿತ್ತು. ಕೆಲವೊಮ್ಮೆ ಕೇಂದ್ರ ಸರಕಾರದಿಂದ ಸಮಯಕ್ಕೆ ಸರಿಯಾಗಿ ನೆರವು ಬಂದರೂ ರಾಜ್ಯ ಸರಕಾರ ಸಮರ್ಪಕ ನಿರ್ವ ಹಣೆ ತೋರುತ್ತಿಲ್ಲ ಎಂಬ ಆರೋ ಪವೂ ಕೇಳಿಬರುತ್ತಿದೆ. ಇಷ್ಟೇ ಅಲ್ಲದೆ ಕೆಲವು ರೈತರಿಗೆ ಮೊತ್ತ ಜಮೆ ಯಾದರೆ ಇನ್ನಷ್ಟು ರೈತರಿಗೆ ಜಮೆ ಯಾಗುತ್ತಿಲ್ಲ ಎಂಬ ಆರೋಪ ಫಲಾ ನುಭವಿಗಳದ್ದಾಗಿದೆ. ಹೀಗಾಗಿ ಯೋಜನೆಯು ರೈತರನ್ನು ಸೆಳೆಯುವಲ್ಲಿ ವಿಫಲವಾಗಿದೆ.