ನವ ದೆಹಲಿ : ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲಾ ರೈತರಿಗೆ ಮೋದಿ ಸರ್ಕಾರದ ಕಿಸಾನ್ ಸಮ್ಮಾನ್ ಧನ್ ಯೋಜನೆಯ ಲಾಭ ಕೂಡ ಸಿಗುಲಿದೆ ಎಂಬ ಸಿಹಿ ಸುದ್ದಿ ಬಂದಿದೆ.
ಪಿಎಂ ಕಿಸಾನ್ ಲಾಭಾರ್ಥಿಗಳಿಗೆ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಪಿಎಂ ಕಿಸಾನ್ ಸಮ್ಮಾನ್ ಧನ್ ಯೋಜನೆಯ ಲಾಭ ಕೂಡ ನೀಡುತ್ತಿದೆ.
ಕೇಂದ್ರ ಸರ್ಕಾರದ ವತಿಯಿಂದ ಸಣ್ಣ ಹಿಡುವಳಿದಾರರು ಹಾಗೂ ಗಡಿಭಾಗದ ರೈತರಿಗೆ ಪೆನ್ಷನ್ ಯೋಜನೆ ನಡೆಸಲಾಗುತ್ತದೆ. 60 ವರ್ಷ ವಯಸ್ಸಿನ ಬಳಿಕ ತಿಂಗಳಿಗೆ ರೂ.3000 ನೀಡಲಾಗುತ್ತದೆ. ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆಯುತ್ತಿದ್ದರೆ, ಈ ಯೋಜನೆಯ ಲಾಭ ಪಡೆಯಲು ನಿಮಗೆ ಹೆಚ್ಚುವರಿ ದಾಖಲೆಗಳು ನೀಡಬೇಕಾದ ಅವಶ್ಯಕತೆ ಇಲ್ಲ.
ಓದಿ : ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಸುಂದರ್ ಪಿಚೈ
ಒಂದು ವೇಳೆ ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಧನ್ ಯೋಜನೆಯ ಲಾಭ ಪಡೆಯಲು ಇಚ್ಛಿಸುವವರು ನೀವಾದರೇ, ನಿಮಗೆ ಪ್ರಧಾಮ ಮಂತ್ರಿ ಕಿಸಾನ್ ಯೋಜನೆಯಿಂದ ಬಂದ ಲಾಭವನ್ನು ನೇರವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಧನ್ ಗೆ ಕೊಡುಗೆಯಾಗಿ ನೀಡುವ ಆಯ್ಕೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಇದೆ. ಅಂದರೆ ಪ್ರಧಾನ ಮಂತ್ರಿ ಕಿಸಾನ್ ನಿಂದ ಬಂದ 6000 ರೂಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಧನ್ ಯೋಜನೆಯ ನಿಮ್ಮ ಕೊಡುಗೆ ಕಡಿತವಾಗಲಿದೆ ಹಾಗೂ ಇದಕ್ಕಾಗಿ ನೀವು ಯಾವುದೇ ರೀತಿಯ ಹೆಚ್ಚುವರಿ ಕೊಡುಗೆ ನೀಡಬೇಕಾದ ಅವಶ್ಯಕತೆ ಇಲ್ಲ. ಇದಲ್ಲದೆ ಪ್ರಿಮಿಯಂ ಕಡಿತದ ಬಳಿಕ ಉಳಿಯುವ ಹೆಚ್ಚುವರಿ ಮೊತ್ತ ನಿಮ್ಮ ಖಾತೆಗೆ ವರ್ಗಾವಣೆಯಾಗಲಿದೆ. ಇದರಿಂದ ರೈತರಿಗೆ ವಾರ್ಷಿಕವಾಗಿ 36 000 ರೂ ಕೂಡ ಸಿಗಲಿದೆ ಮತ್ತು ಮುಂದಿನ ಮೂರು ಕಂತುಗಳು ಕೂಡ ಸಿಗಲಿವೆ.
ಓದಿ : ಶಾಸಕಿ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಮೇ 5ರ ವರೆಗೆ ಹೋಮ್ ಕ್ವಾರಂಟೈನ್