ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿನ ಭಾರತ-ಚೀನ ಗಡಿಯಲ್ಲಿ, 11,000 ಅಡಿ ಎತ್ತರದಲ್ಲಿ, ನೀಲಾಂಗ್ ಕಣಿವೆಯಲ್ಲಿರುವ ಹರ್ಷಿಲ್ ಸಮೀಪದ ಪ್ರದೇಶದಲ್ಲಿ ಭಾರತೀಯ ಜವಾನರೊಂದಿಗೆ 2018ರ ದೀಪಾವಳಿಯನ್ನು ಇಂದು ಬುಧವಾರ ಬೆಳಗ್ಗೆ ಆಚರಿಸಿದರು.
ಅನಂತರ ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿನ ಶಿವ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ್ದರು.
ಕೊರೆಯುವ ಚಳಿಯಲ್ಲಿ ದೇಶದ ರಕ್ಷಣೆಯ ಕರ್ತವ್ಯವದಲ್ಲಿ ನಿರತರಾಗಿರುವ ಭಾರತೀಯ ಜವಾನರ ದೃಢ ಸಂಕಲ್ಪ, ಕರ್ತವ್ಯ ಪರತೆಯನ್ನು ಪ್ರಧಾನಿ ಮೋದಿ ಬಹುವಾಗಿ ಕೊಂಡಾಡಿ ಅವರೊಂದಿಗೆ ದೀಪಾವಳಿಯನ್ನು ಆಚರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.
ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಚುನಾಯಿತರಾದ 2014ರಿಂದಲೂ ವರ್ಷಂಪ್ರತಿ ಗಡಿಯಲ್ಲಿ ಕರ್ತವ್ಯ ನಿರತ ಸೈನಿಕರೊಂದಿಗೆ ಸೇರಿಕೊಂಡು ದೀಪಾವಳಿ ಆಚರಿಸುವ ಕ್ರಮವನ್ನು ಇಟ್ಟುಕೊಂಡಿದ್ದಾರೆ. 2014ರಲ್ಲಿ ಮೋದಿ ಅವರು ಸಿಯಾಚಿನ್ ನಲ್ಲಿನ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.
ಪ್ರಧಾನಿ ಮೋದಿ, ಭಾರತೀಯ ಸೈನಿಕರು, ದೀಪಾವಳಿ ಆಚರಣೆ,