Advertisement

Border Dispute: ಚೀನ ಜತೆಗಿನ ಗಡಿ ಸಮಸ್ಯೆ ಇತ್ಯರ್ಥಕ್ಕೆ ಬದ್ಧ: ವಿದೇಶಾಂಗ ಸಚಿವ ಜೈಶಂಕರ್‌

03:34 AM Dec 04, 2024 | Team Udayavani |

ಹೊಸದಿಲ್ಲಿ: ಚೀನ ಜತೆಗಿನ ಗಡಿ ಸಮಸ್ಯೆಯನ್ನು ನ್ಯಾಯಸಮ್ಮತ, ಸ್ವೀಕಾರಾರ್ಹ ಚೌಕಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕ ಇತ್ಯರ್ಥಪಡಿಸಿ ಕೊಳ್ಳಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಘೋಷಿಸಿದ್ದಾರೆ.

Advertisement

ಈ ಸಂಬಂಧ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಸದ್ಯ 2 ದೇಶಗಳ ಸೇನೆಗಳು ವಾಪಸಾಗಿವೆ. ಗಡಿ ವಿಚಾರದಲ್ಲಿ ಚೀನ ಹೊಂದಿದ್ದ ನಿಲುವಿನಿಂದ 2020ರಿಂದ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗಿಲ್ಲ. 2020ರ ಎಪ್ರಿಲ್‌-ಮೇಯಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನ ಸೇನೆಯ ಜಮಾವಣೆ ಯಿಂದ ಹಲವಾರು ಬಾರಿ ಮುಖಾಮುಖೀಯಾಗಿದೆ. ಗಾಲ್ವಾನ್‌ ಕಣಿವೆ ಘರ್ಷಣೆ ನಂತರ ಪರಿಸ್ಥಿತಿ ನಿಯಂತ್ರಿಸಲು ಬೃಹತ್‌ ಪ್ರಮಾಣದಲ್ಲಿ ಸೇನೆ ನಿಯೋಜಿಸಬೇಕಾಯಿತು ಎಂದರು.

3 ತತ್ವಗಳು:
2 ದೇಶಗಳು ಪರಸ್ಪರ ಗಡಿ ಗೌರವಿಸ ಬೇಕು, ಪರಿಸ್ಥಿತಿಯಲ್ಲಿ ಬದಲಾವಣೆ ಮಾಡುವುದಕ್ಕೆ ಯತ್ನಿಸಬಾರದು, ಬಾಂಧವ್ಯ ವೃದ್ಧಿಗೆ ಸಂಬಂಧಿಸಿ ದಂತೆ ಹಿಂದಿನ ಒಪ್ಪಂದಗಳನ್ನು ಗೌರವಿಸಬೇಕು ಎಂಬ 3 ತತ್ವಗಳನ್ನು 2 ರಾಷ್ಟ್ರಗಳು ಪಾಲಿಸಬೇಕು. ಈ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ಭಾರತ ಈ ಹಿಂದೆಯೂ ಬದ್ಧವಾಗಿತ್ತು. ಮುಂದೆಯೂ ಅದೇ ನಿಲುವನ್ನು ಪ್ರತಿಪಾದಿಸುತ್ತೇವೆ ಎಂದರು. ಲಡಾಖ್‌ನಲ್ಲಿ ಸೇನೆಗಳ ವಾಪಸಾತಿ ಬಳಿಕ ಸತತ ರಾಜತಾಂತ್ರಿಕ ಮಾತುಕತೆ ಮೂಲಕ ಎರಡೂ ದೇಶಗಳ ಸಂಬಂಧ ವೃದ್ಧಿಯಲ್ಲಿ ಅಲ್ಪ ಪ್ರಗತಿ ಸಾಧಿಸಲಾಗಿದೆ ಎಂದು ಜೈಶಂಕರ್‌ ಹೇಳಿದರು.

ಚೀನ ಜತೆಗೆ ಶಾಂತಿ, ನೆಮ್ಮದಿ ಮರು ಸ್ಥಾಪಿಸಿ ಮುನ್ನಡೆಯಲು ನಾವು ಸಿದ್ಧವಿದ್ದೇವೆ ಎಂದರು. ಇದಲ್ಲೇ ತಮಗಿರುವ ಸವಾಲುಗಳ ಮಧ್ಯೆಯೂ ಚೀನ ಸೇನೆಯನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಸೇನೆಯ ಹೊಗಳಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ವಿದೇಶಾಂಗ ಸಚಿವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next