Advertisement

ಪಂಡಿತರ ಹತ್ಯಾಕಾಂಡದ ತನಿಖೆ ನಡೆಸಲು ಸೂಚಿಸಿ

08:05 PM Mar 27, 2022 | Team Udayavani |

ನವದೆಹಲಿ: 1989ರಿಂದ 2002ರವರೆಗೆ ಕಾಶ್ಮೀರದಲ್ಲಿ ನಡೆದಿರುವ ಹಿಂದೂಗಳು ಹಾಗೂ ಸಿಖ್‌ ಸಮುದಾಯದ ಹತ್ಯಾಕಾಂಡದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ.

Advertisement

“ವಿ ದ ಸಿಟಿಜನ್ಸ್‌’ ಎಂಬ ಸರ್ಕಾರೇತರ ಸಂಸ್ಥೆ ಈ ಅರ್ಜಿ ಸಲ್ಲಿಸಿದ್ದು, ಅಂದಿನ ಹಿಂಸಾಚಾರಕ್ಕೆ ಹೆದರಿ ಕಾಶ್ಮೀರದಿಂದ ಓಡಿಬಂದು ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಹಿಂದೂಗಳು ಹಾಗೂ ಸಿಖ್‌V ಸಮುದಾಯದವರ ಜನಗಣತಿಯನ್ನೂ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದೂ ಕೋರಿದೆ.

ಜೊತೆಗೆ, 1990ರಲ್ಲಿ ಕಾಶ್ಮೀರದಿಂದ ಹಿಂದೂಗಳು ಸಾಮೂಹಿಕ ವಲಸೆ ಹೋದ ನಂತರ ಅವರಿಗೆ ಸಂಬಂಧಿಸಿದ ಹೊಲಗಳು, ಮನೆಗಳು, ವಾಣಿಜ್ಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿ ಎಲ್ಲಾ ಸ್ಥಿರಾಸ್ತಿಗಳ ಮಾರಾಟ ವ್ಯವಹಾರಗಳನ್ನು ಅಸಿಂಧುಗೊಳಿಸಬೇಕೆಂದೂ ಮನವಿ ಮಾಡಲಾಗಿದೆ.

ಮೌಲ್ವಿ ವಿವಾದಾತ್ಮಕ ಹೇಳಿಕೆ
“ದ ಕಾಶ್ಮೀರ್‌ ಫೈಲ್ಸ್‌’ ಚಿತ್ರವನ್ನು ನಿಷೇಧಿಸಬೇಕು ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿರುವ ಜಾಮಿಯಾ ಮಸೀದಿಯ ಮೌಲ್ವಿ ಫಾರೂಕ್‌ ಹೊಸ ವಿವಾದ ಸೃಷ್ಟಿಸಿದ್ದಾರೆ. ನೀವು ಕಳೆದ 70 ವರ್ಷಗಳಿಂದ ನಮ್ಮನ್ನು ಆಳುತ್ತಿದ್ದೀರಿ. ಆದರೆ, ದೇವರ ದಯೆಯಿಂದ, ನೀವೆಲ್ಲರೂ ನಾಶವಾಗುತ್ತೀರಿ. ಆದರೆ, ಕಣಿವೆಯಲ್ಲಿ ಇಸ್ಲಾಮ್‌ ಮಾತ್ರ ನಾಶವಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮೇಯರ್‌ ಕವೀಂದರ್‌ ಗುಪ್ತಾ, ಇಂಥ ಮೌಲ್ವಿಗಳೇ ಕಾಶ್ಮೀರವನ್ನು ಹಾಳುಗೆಡವಿದ್ದು. ಇವರೆಲ್ಲರೂ ಪಾಕಿಸ್ತಾನದ ಸಿದ್ಧಾಂತಗಳಿಗೆ ತಕ್ಕಂತೆ ವರ್ತಿಸುತ್ತಾರೆ ಎಂದಿದ್ದಾರೆ.

250 ಕೋಟಿ ರೂ. ಕಲೆಕ್ಷನ್‌:
ಜಗತ್ತಿನಾದ್ಯಂತ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ಶನಿವಾರದ (ಮಾ. 26) ಹೊತ್ತಿಗೆ 250 ಕೋಟಿ ರೂ. ಗಳಿಸಿದೆ. ಶುಕ್ರವಾರ, 4.5 ಕೋಟಿ ರೂ. ಗಳಿಸಿದ್ದ ಸಿನಿಮಾ, ಶನಿವಾರದಂದು 7.25 ಕೋಟಿ ರೂ.ಗಳಿಸಿದ್ದು, ಆ ಮೂಲಕ 250 ಕೋಟಿ ರೂ. ಕ್ಲಬ್‌ಗ ಸೇರ್ಪಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next