Advertisement

ಲಸಿಕೆ ವಿತರಣೆಗೆ ಯೋಜನೆ; ಆದ್ಯತಾ ವಲಯ ಗುರುತಿಸಿರುವ ಕೇಂದ್ರ

11:07 PM Oct 23, 2020 | mahesh |

ಹೊಸದಿಲ್ಲಿ: ಕೋವಿಡ್ ಲಸಿಕೆ ಲಭ್ಯವಾದ ತತ್‌ಕ್ಷಣವೇ ಅದನ್ನು ವಿತರಿಸಲು ವಿಶೇಷ ಕೋವಿಡ್‌-19 ಲಸಿಕೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಆದ್ಯತಾ ವಲಯವನ್ನು ಗುರುತಿಸಲಾಗುತ್ತಿದ್ದು, ಆರಂಭದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಕೇಂದ್ರವೇ ಔಷಧ ಕಂಪೆನಿಗಳಿಂದ ಲಸಿಕೆ ಖರೀದಿಸಲಿದೆ. ಇದನ್ನು ಆದ್ಯತಾ ವಲಯದ ಮಂದಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಹಾಲಿ ಇರುವ ವಿತರಣ ವಿಧಾನವನ್ನೇ ಬಳಸಿಕೊಳ್ಳಲಾಗುತ್ತದೆ ಎಂದು ಸರಕಾರದ ಮೂಲಗಳು ಹೇಳಿವೆ. ರಾಜ್ಯಗಳು ತಮ್ಮದೇ ಆದ ಖರೀದಿ ವಿಧಾನ ರೂಪಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಶೇ. 60ರಷ್ಟು ಪರಿಣಾಮಕಾರಿ
ಸದ್ಯ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ ನಡೆಸುತ್ತಿರುವ ಭಾರತ್‌ ಬಯೋಟೆಕ್‌ ತನ್ನ 3ನೇ ಹಂತದ ಲಸಿಕೆ ಪ್ರಯೋಗ ಶೇ. 60ರಷ್ಟು ಪರಿಣಾಮ ಕಾರಿಯಾಗಿರಲಿದೆ ಎಂದಿದೆ.

ಲಸಿಕೆಗೆ ಆಧಾರ್‌ ಲಿಂಕ್‌
ಲಸಿಕೆಯನ್ನು ಆಧಾರ್‌ ಕಾರ್ಡ್‌ ಜತೆಗೆ ಲಿಂಕ್‌ ಮಾಡಲಾಗುತ್ತದೆ. ನವೆಂಬರ್‌ ಮಧ್ಯದೊಳಗೆ ರಾಜ್ಯಗಳು ಆದ್ಯತಾ ವಲಯಕ್ಕೆ ಸೇರಬೇಕಿರುವವರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಬೇಕು. ಬಳಿಕ ಇವರ ಆಧಾರ್‌ಗಳನ್ನು ಈ ಲಸಿಕಾ ಕಾರ್ಯಕ್ರಮಕ್ಕೆ ಜೋಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇವಿಐಎನ್‌ ಮಾರ್ಗ
ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿರುವ ಡಿಜಿಟಲ್‌ ವೇದಿಕೆಯನ್ನೇ ಕೊರೊನಾ ಲಸಿಕೆಗೂ ಬಳಸಲಾಗುತ್ತದೆ. ಇದಕ್ಕಾಗಿ ಸದ್ಯದ ಡಿಜಿಟಲ್‌ ವೇದಿಕೆಯನ್ನು ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್‌ (ಇವಿಐಎನ್‌) ಆಗಿ ರೂಪಿಸಲಾಗುತ್ತದೆ.

Advertisement

ವಿತರಣೆ ಹೇಗೆ?
1 ಕೇಂದ್ರ ಸರಕಾರದಿಂದಲೇ ನೇರ ಖರೀದಿ
2 ಆದ್ಯತಾ ವಲಯದಲ್ಲಿ 30 ಕೋಟಿ ಮಂದಿ
3 ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಕೋವಿಡ್‌-19 ಲಸಿಕೆ ಕಾರ್ಯಕ್ರಮ
4 ಪ್ರಕ್ರಿಯೆ, ತಂತ್ರಜ್ಞಾನ ಮತ್ತು ಸಂಪರ್ಕ ಜಾಲಕ್ಕಾಗಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಬಳಕೆ

ನಾಲ್ಕು ವಲಯವಾಗಿ ವರ್ಗೀಕರಣ
ವಿಭಾಗ 1
ಆರೋಗ್ಯ ಸೇವೆ
1 ಕೋಟಿ ಮಂದಿ ವೈದ್ಯರು, ಎಂಬಿಬಿಎಸ್‌ ವಿದ್ಯಾರ್ಥಿಗಳು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಇತರ.

ವಿಭಾಗ 2
ಮುಂಚೂಣಿ ಕಾರ್ಯಕರ್ತರು
2 ಕೋಟಿ ಮಂದಿ ಪೌರ ಕಾರ್ಮಿಕರು, ಪೊಲೀಸ್‌ ಮತ್ತು ಸೇನಾ ಪಡೆಯ ಸಿಬಂದಿ.

ವಿಭಾಗ 3-4
50+ ಮತ್ತು  ವಿಶೇಷ ವಲಯ
26 ಕೋಟಿ 50 ವರ್ಷ ದಾಟಿದವರು, 50 ವರ್ಷಕ್ಕಿಂತ ಕಡಿಮೆ ಇದ್ದು, ಬೇರೆ ಬೇರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು.

Advertisement

Udayavani is now on Telegram. Click here to join our channel and stay updated with the latest news.

Next