Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೃಷಿಕರಿಗೆ ಕಾರ್ಯಾಗಾರದ ಮೂಲಕ ಈ ಮಾಹಿತಿ ನೀಡಿ ಮೀನು ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಗತಿಯಲ್ಲಿದೆ.
ಹಾಸನ ಸೇರಿದಂತೆ ವಿವಿಧೆಡೆ ಮೊಡೆಂಜಿ ಮೀನು ಸಾಕಣೆ ಸಾಕಷ್ಟು ಮನ್ನಣೆ ಪಡೆದಿದೆ. ಹಾಸನದ ಕೃಷಿಕನೋರ್ವ ಒಂದು ಎಕರೆ ಕೆರೆಯಲ್ಲಿ ಮೊಡೆಂಜಿ ಸಾಕಿ 15 ಲಕ್ಷ ರೂ. ಆದಾಯ ಸಂಪಾದಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 600ರಿಂದ 700 ರೂ. ತನಕ ಬೇಡಿಕೆ ಇದೆ.
Related Articles
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಅಡಿಕೆ ತೋಟಗಳಲ್ಲಿ ಕೆರೆಗಳಿದ್ದು ಅವುಗಳಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ. ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಡಿ ಸಬ್ಸಿಡಿ ಒದಗಿಸಿ ಮೊಡೆಂಜಿ, ಮಲೆಜಿ ತಳಿ ಸಾಕಣೆಗೆ ಚಾಲನೆ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಮರಿಗಳನ್ನು ತಂದು ಕೃಷಿಕರಿಗೆ ಪೂರೈಸಲಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನ ಪ್ರಮಾಣ ಹೆಚ್ಚಾದಲ್ಲಿ ಇಲ್ಲೇ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟಿನಲ್ಲಿ ಪರ್ಯಾಯ ಅಥವಾ ಉಪ ಬೆಳೆಯಾಗಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಿ ಉದ್ಯೋಗಾವಕಾಶ ಕಲ್ಪಿಸುವುದು ಇಲಾಖೆಯ ಗುರಿ.
Advertisement
ತೋಟದ ಕೆರೆಗಳಲ್ಲಿ ಮೀನು ಕೃಷಿಗೆ ಹೇರಳ ಅವಕಾಶ ಇದೆ. ಔಷಧೀಯ ಗುಣವುಳ್ಳ ಮೊಡೆಂಜಿ, ಮಲೆಜಿ ತಳಿಗಳನ್ನು ರಾಷ್ಟ್ರ ಮಟ್ಟದಲ್ಲಿ ಕರಾವಳಿ ಬ್ರಾÂಂಡ್ ಆಗಿ ರೂಪಿಸುವ ಚಿಂತನೆ ನಡೆದಿದೆ.– ಎಸ್. ಅಂಗಾರ, ಬಂದರು ಮತ್ತು ಮೀನುಗಾರಿಕೆ ಸಚಿವ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ಮೀನಿನ ಬೇಡಿಕೆ ಇದ್ದು 2.5 ಲಕ್ಷ ಮೆಟ್ರಿಕ್ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಉತ್ತಮ ಅವಕಾಶ ಇರುವ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಿ ಮೊಡೆಂಜಿ, ಮಲೆಜಿ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುವುದು. ಅಂತೆಯೇ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ನೀಡಲಾಗುವುದು.
– ರಾಮಚಾರ್ಯ, ಜಂಟಿ ನಿರ್ದೇಶಕ, ಮೀನುಗಾರಿಕೆ ಇಲಾಖೆ