Advertisement
ಸೋಮವಾರ ಮೂರುಸಾವಿರ ಮಠ ಶಾಲೆ ಆವರಣದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಭಾರತ್ ಬ್ರ್ಯಾಂಡ್ ನ ಆಹಾರ ಧಾನ್ಯಗಳ ಮಾರಾಟದ ಸುಮಾರು 50 ವಾಹನಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಲವಾರು ಕಾರಣಗಳಿಂದ ದೇಶದಲ್ಲಿ ಆಹಾರ ಧಾನ್ಯಗಳು, ಇನ್ನಿತರ ನಿತ್ಯ ಬಳಕೆ ಉತ್ಪನ್ನಗಳ ದರಗಳು ಹೆಚ್ಚಳವಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 10 ಸಾವಿರ ಕೋಟಿ ರೂ.ಗಳನ್ನು ಬೆಲೆ ಸ್ಥಿರೀಕರಣ ನಿಧಿಯಾಗಿ ಇರಿಸಿದೆ. ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಭಾರತ್ ಬ್ರ್ಯಾಂಡ್ ನಲ್ಲಿ ನೀಡಲಾಗುತ್ತಿದೆ. ದೇಶಾದ್ಯಂತ ಸುಮಾರು 3,69,467 ಮೆಟ್ರಿಕ್ ಟನ್ ಅಕ್ಕಿ, ಸುಮಾರು 2,93, 737 ಮೆಟ್ರಿಕ್ ಟನ್ ಗೋಧಿಯನ್ನು ಇದಕ್ಕಾಗಿ ಸಂಗ್ರಹಿಸ ಲಾಗಿದೆ. 30 ರೂ.ಗೆ ಕೆಜಿಯಂತೆ ಅಕ್ಕಿ, 70 ರೂ.ಗೆ ಕೆಜಿಯಂತೆ ಕಡಲೆಬೇಳೆ, 107 ರೂ.ಗೆ ಕೆಜಿಯಂತೆ ಹೆಸರು ಬೇಳೆ ಇನ್ನಿತರ ಆಹಾರ ಧಾನ್ಯಗಳನ್ನು ಸಹ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಅಕ್ಕಿ 5, 10 ಕೆಜಿ ಪಾಕೆಟ್‌ನಲ್ಲಿ ಸಿಕ್ಕರೆ, ಬೇಳೆಗಳು 1 ಕೆಜಿ ಪಾಕೆಟ್‌ನಲ್ಲಿ ದೊರೆಯುತ್ತವೆ. ರಾಜ್ಯದಿಂದಲೂ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ಸಿದ್ಧವಿದೆ. ನಮಗೆ ಬೇಕಾಗುವಷ್ಟು ಅಕ್ಕಿ ಇಲ್ಲಿ ಸಿಗುತ್ತಿಲ್ಲವಾದ್ದರಿಂದ ಪಂಜಾಬ್ ಇನ್ನಿತರ ಕಡೆಯಿಂದ ಅಕ್ಕಿ ಖರೀದಿಸ ಲಾಗುತ್ತಿದೆ. ಸಂಗ್ರಹವಿರುವ ದಾಸ್ತಾನಿಂದ ಪಡೆದ ಅಕ್ಕಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಹೇಳಿದರು.