ವಾಷಿಂಗ್ಟನ್: ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಅನುದಾನ ನೀಡದ ಹಿನ್ನೆಲೆಯಲ್ಲಿ ಅಮೆರಿಕ ಶಟ್‌ಡೌನ್ ಆಗಿ ಬರೋಬ್ಬರಿ 27 ದಿನಗಳು ಪೂರೈಸಿವೆ. ಲಕ್ಷಾಂತರ ನೌಕರರು ವೇತನವಿಲ್ಲದೆ ದುಡಿಯಬೇಕಾದ ಸ್ಥಿತಿಯಿದ್ದು, ದಿನ ಕಳೆದಂತೆ ಕಂಗಾಲಾಗುತ್ತಿದ್ದಾರೆ. ಇಂಥ ಸ್ಥಿತಿಯ ನಡುವೆಯೇ, ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರ ಮಾನವೀಯ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ವೇತನವಿಲ್ಲದೇ ದುಡಿಯುತ್ತಿರುವ ಸೀಕ್ರೆಟ್ ಸರ್ವೀಸ್ ಸಿಬಂದಿಗೆ ಬುಷ್ ಅವರೇ ಸ್ವತಃ ಪಿಜ್ಜಾ ಡೆಲಿವರಿ ಮಾಡಿದ್ದಾರೆ.
ಶನಿವಾರ ಈ ಫೋಟೋವನ್ನು ಅವರೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ನಮ್ಮ ಸೀಕ್ರೆಟ್ ಸರ್ವಿಸ್ ಸಿಬಂದಿ ಹಾಗೂ ಸಾವಿರಾರು ಫೆಡರಲ್ ನೌಕರರು ವೇತನವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದು ಬರೆದಿದ್ದಾರೆ.
ಜತೆಗೆ, ಡೆಮಾಕ್ರಾಟ್ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕರು ಪರಸ್ಪರ ಪಟ್ಟು ಸಡಿಲಿಸಿ, ಶಟ್‌ಡೌನ್ ಅಂತ್ಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕಿದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಪಿಜ್ಜಾ ಡೆಲಿವರಿ ಮಾಡುತ್ತಿರುವ ಬುಷ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.