Advertisement

Pinki Elli movie review: ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಪಿಂಕಿ

11:45 AM Jun 05, 2023 | Team Udayavani |

ಆಧುನಿಕ ಜಗತ್ತಿನ ಬೇಕು-ಬೇಡಗಳು, ಜಂಜಾಟ, ಸ್ವತಂತ್ರ ಮನೋಭಾವ ಪ್ರತಿಯೊಬ್ಬರ ಬದುಕಿಗೂ ಅವರದ್ದೇ ಆದ ದೃಷ್ಠಿಕೋನದಲ್ಲಿ ಒಂದೊಂದು ಅರ್ಥ ಕಲ್ಪಿಸಿಕೊಡುತ್ತವೆ. ಹಾಗಂತ ಇಲ್ಲಿ ಯಾರನ್ನೂ ವಹಿಸಿಕೊಳ್ಳಲಾಗದು, ಯಾರ ಪರವಾಗಿಯೂ ನಿಲ್ಲಲಾಗದು, ಯಾವುದನ್ನೂ ಜರಿಯಲೂ ಆಗದು. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಎದುರಾಗುವ ಪರಿಸ್ಥಿತಿ ಬದುಕನ್ನು ಹೇಗೆಲ್ಲ ಹೈರಾಣಾಗಿ ಸುತ್ತದೆ. ಅದಕ್ಕೆ ಸಾಮಾಜಿಕ ಮತ್ತು ಶ್ರೀಸಾಮಾನ್ಯನ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ಈ ವಾರ ತೆರೆಗೆ ಬಂದಿರುವ “ಪಿಂಕಿ ಎಲ್ಲಿ?’ ಸಿನಿಮಾದ ವಸ್ತು ವಿಷಯ.

Advertisement

ತಾಯಿಯ ಮಡಿಲಿನಲ್ಲಿ ಬೆಚ್ಚಗೆ ಬೆಳೆಯಬೇಕಾದ 8 ತಿಂಗಳ ಹೆಣ್ಣು ಮಗು ಪಿಂಕಿ, ತಂದೆ-ತಾಯಿ ಇದ್ದರೂ ಬೇರೊಬ್ಬರ ಜೋಳಿಗೆ ತುಂಬಿಸಲು ದುಡಿಯುವಮಗುವಾಗುತ್ತದೆ. ಮನೆಯಿಂದ ಕಾಣೆಯಾಗುವ ಪಿಂಕಿಯ ಹುಡುಕಾಟದ ಸುತ್ತ “ಪಿಂಕಿ ಎಲ್ಲಿ?’ ಸಿನಿಮಾದ ಕಥಾಹಂದರ ಸಾಗುತ್ತದೆ.

ಅಂದಹಾಗೆ, “ಪಿಂಕಿ ಎಲ್ಲಿ?’ ಸಿನಿಮಾದಲ್ಲಿ ಪಿಂಕಿ ಎಂಬ ಮಗು ಕೇವಲ ಸಾಂಕೇತಿಕವಷ್ಟೇ. ಪಿಂಕಿ ಕಳೆದು ಹೋದ ನಂತರ ಮಗುವಿನ ಹುಡುಕಾದ ನಡುವೆಯೇ ಅದರ ಪೋಷಕರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅಲ್ಲಿ ದಾಂಪತ್ಯ, ಮಾನವ ಸಂಬಂಧಗಳ ಹುಳುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾನಗರಗಳಲ್ಲಿ ಬದುಕಿನ ಅನಿವಾರ್ಯತೆ ವಿರಾಟ್‌ ದರ್ಶನವಾಗುತ್ತದೆ. ಸ್ಲಂಗಳು, ಅಲ್ಲಿನ ಜನ ಜೀವನ, ಗೊಂದಲಮಯ ಬದುಕು ಮತ್ತು ಸಾಮಾಜಿಕ ಮನಸ್ಥಿತಿ, ಸ್ಥಿತಿಗತಿ ಎಲ್ಲವೂ ತೆರೆದುಕೊಳ್ಳುತ್ತದೆ. ಮಗುವನ್ನು ಕಳೆದು ಕೊಂಡ ತಾಯಿಯೊಬ್ಬಳ ಒಡಲಾಳದ ನೋವು ಮತ್ತು ಅಸಹಾಯಕ ನಿಲವು ಅಲ್ಲಲ್ಲಿ ಕರುಣೆ ಹುಟ್ಟಿಸುತ್ತದೆ.

ಇನ್ನು ಆಕೆಯ ಪತಿ ಹಾಗೂ ಸ್ನೇಹಿತ ಎಂಬ ಎರಡು ಪಾತ್ರಗಳಿಗೆ ಎರಡು ಆಯಾಮಗಳಿವೆ. ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದನ್ನು ಮನಮುಟ್ಟುವಂತೆ ಚಿತ್ರರೂಪದಲ್ಲಿ ತೆರೆಮೇಲೆ ತರುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು ಯಶಸ್ವಿಯಾಗಿದ್ದಾರೆ. ಬದುಕಿನ ಅನಿವಾರ್ಯತೆ ಯಲ್ಲಿ ಬೇಯುವ ಮನಸ್ಸುಗಳು ತಮ್ಮದೇ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳಿಂದ ಹೇಗೆಲ್ಲ ಪರಿತಪಿಸಬೇಕಾಗುತ್ತದೆ ಎಂಬುದನ್ನು “ಪಿಂಕಿ ಎಲ್ಲಿ?’ ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ಕಲಾವಿದರಾದ ಅಕ್ಷತಾ ಪಾಂಡವ ಪುರ, ದೀಪಕ್‌ ಸುಬ್ರಮಣ್ಯ, ಶೂನ್ಯ, ಗುಂಜಲಮ್ಮ, ಅನಸೂಯಮ್ಮ ಮೊದಲಾದವರು ಯಾವುದೇ ಆಡಂಭರವಿಲ್ಲದೆ ತಮ್ಮ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ. ನೋಡುನೋಡುತ್ತಿದ್ದಂತೆ, ನಿಧಾನ ವಾಗಿ ಆವರಿಸಿ ಕೊಳ್ಳುವ ಪಿಂಕಿಯ ಹುಡು ಕಾಟ ನೋಡುಗರ ಮನಸ್ಸನ್ನು ಅಲ್ಲಲ್ಲಿ ಆದ್ರವಾಗಿಸುತ್ತದೆ.

Advertisement

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next