Advertisement

Megha Movie Review: ʼಮೇಘʼ ತಂದ ಸಂದೇಶ

01:58 PM Nov 30, 2024 | Team Udayavani |

ಮನುಷ್ಯನ ಭಾವನಾ ಲೋಕದಲ್ಲಿ ಸ್ನೇಹ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಂತೆ. ಈ ಭಾವನೆಗಳು ಸಮಾನಾಂತರವಾಗಿ ಸಾಗಿದಾಗ, ಜೀವನವೂ ವರ್ಣರಂಜಿತ. ವ್ಯಕ್ತಿಗೆ ಸ್ನೇಹ, ಪ್ರೀತಿ ಎರಡೂ ಮುಖ್ಯ. ಒಂದನ್ನು ಅಗಲಿ ಇನ್ನೊಂದು ಇರಲಾರದು. ಇದೇ ಮೂಲ ಕಲ್ಪನೆ ಈಗ ಸಿನಿಮಾ ಕಥೆಯಾಗಿ ರೂಪಗೊಂಡಿದೆ. ಅದುವೇ “ಮೇಘ’.

Advertisement

“ಮೇಘ’ ಇದು ಭಾವನೆಗಳ ಪಯಣ. ಇಲ್ಲೊಂದು ನವೀರಾದ ಜೋಡಿಯಿದೆ. ಅವರಿಬ್ಬರ ನಡುವೆ ಒಂದಿಷ್ಟು ಭಾವನೆ ಗಳಿವೆ. ಇಬ್ಬರಿಗೂ ನೋವೊಂದರ ಕಹಿಯಿದೆ. ಸ್ನೇಹದಿಂದ ಆರಂಭವಾ ಗುವ ಇವರ ಸಂಬಂಧ, ಮುಂದೆ ಹೊಸ ಪಯಣಕ್ಕೆ ನಾಂದಿ ಹಾಡುತ್ತದೆ. ಇದು ನವೀರಾದ ಪ್ರೇಮ ಕಥೆ. ಕಥೆಯನ್ನು ಹಾಗೇ ಹೇಳಿದರೆ, ಅದಕ್ಕೆ ಸ್ವಾರಸ್ಯವೆಲ್ಲಿ? ಹಾಗಾಗಿ ಒಂದಿಷ್ಟು ತಿರುವುಗಳೂ ಇಲ್ಲಿವೆ. ಆ ತಿರುವಿನ ತೀವ್ರತೆ ತೆರೆಯ ಮೇಲೆ ನೋಡಿ, ಅನುಭವಿಸಿದರೆ ಚೆಂದ.

ರೋಚಕ, ರೋಮಾಂಚಕವಾದ ಪ್ರೇಮಕಥೆಯ ಪಯಣ ಸುಖಾಂತ್ಯ ಕಂಡಾಗ, ಪ್ರೇಕ್ಷಕನ ಮನಸ್ಸಿನಲ್ಲೂ ಸ್ನೇಹ-ಪ್ರೀತಿಯ ಭಾವ ಸು#ರಣವಾಗುತ್ತದೆ. ನಟ ಕಿರಣ್‌ ರಾಜ್‌ ಹಾಗೂ ನಟಿ ಕಾಜಲ್‌ ಕುಂದರ್‌ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ತೆರೆ ಮೇಲೆ ಈ ಜೋಡಿಯನ್ನು, ನಿರ್ದೇಶಕ ಚರಣ್‌ ಅಂದವಾಗಿ ಪ್ರಸ್ತುತಪಡಿಸಿದ್ದಾರೆ.

ಜೊಯಲ್‌ ಸಕ್ಕರಿ ಅವರ ಸಂಗೀತ ಚಿತ್ರದ ಪ್ಲಸ್‌ಗಳಲ್ಲಿ ಒಂದು. ಉಳಿದಂತೆ ರಾಜೇಶ್‌ ನಟರಂಗ, ಶೋಭರಾಜ್‌, ನಾಗೇಂದ್ರ ಶಾ, ಗಿರಿ ಶಿವಣ್ಣ, ಹಂಸಾ ಮತ್ತಿತರು ನಟಿಸಿದ್ದಾರೆ. ಒಂದೊಳ್ಳೆ ಪ್ರೇಮಕಥೆಯನ್ನು ನೋಡಬಯಸುವವರಿಗೆ “ಮೇಘ’ ಉತ್ತಮ ಆಯ್ಕೆ.

Advertisement

Udayavani is now on Telegram. Click here to join our channel and stay updated with the latest news.

Next