Advertisement

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ “ಪಿಂಕ್ ಫೀಮೇಲ್ ಫೋರ್ಸ್ ”ಸ್ಥಾಪನೆ

05:17 PM Nov 11, 2021 | Team Udayavani |

ಪಣಜಿ: ರಾಜ್ಯದಲ್ಲಿ ಖಾಯ್ದೆ ಸುವ್ಯವಸ್ಥೆ ನಿಯಂತ್ರಣದಲ್ಲಿಡಲು ಪೋಲಿಸ್ ಇಲಾಖೆಯ ಕೆಲಸ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪೋಲಿಸ್ ಇಲಾಖೆ “ಪಿಂಕ್ ಫೀಮೇಲ್ ಫೋರ್ಸ” ಎಂಬ ಪೋಲಿಸ್ ದಳವನ್ನು ಸ್ಥಾಪನೆ ಮಾಡಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

Advertisement

ಓಲ್ಡಗೋವಾ ಕದಂಬದಲ್ಲಿ ನಡೆದ ಡಿವೈಎಸ್ಪಿಗಳ ತರಬೇತಿ ಮತ್ತು ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮುಖ್ಯಮಂತ್ರಿ ಸಾವಂತ್- ಮಹಿಳಾ ಸುರಕ್ಷತೆಗಾಗಿ ದಕ್ಷ ಮಹಿಳಾ ಪೋಲಿಸ್ ದಳದ ಅಗತ್ಯವಿದೆ. ಈ ಕುರಿತು ಹಿರೀಯ ಪೋಲಿಸ್ ಅಧಿಕಾರಿಗಳ ಬೈಠಕ್ ನಡೆಸಿ ಚರ್ಚಿಸಲಾಗಿದೆ. ಮಹಿಳಾ ಪೋಲಿಸರು ಸಮಾಜದಲ್ಲಿ ಜನರೊಂದಿಗೆ ಮಿತ್ರತ್ವವನ್ನು ಬೆಸೆಯುವುದು ಮಾತ್ರವಲ್ಲದೆಯೇ ಅಪರಾಧಗಳ ತಪಾಸಣೆ ನಡೆಸಲು ಕೂಡ ಅಷ್ಟೇ ಸಾಮಥ್ರ್ಯ ಹೊಂದಿರುತ್ತಾರೆ ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಮಳ್ ರೈ, ಪೋಲಿಸ್ ಮಹಾಸಂಚಾಲಕ ಮುಕೇಶ್‍ಕುಮಾರ್ ಮೀಣಾ, ಪೋಲಿಸ್ ಮಹಾನಿರೀಕ್ಷಕ ರಾಜೇಶ್‍ಕುಮಾರ್, ಪೋಲಿಸ್ ಅಧೀಕ್ಷಕ ಶೇಖರ್ ಪ್ರಭುದೇಸಾಯಿ, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲೊಂದು ರೋಗ ಹರಡುವ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next