Advertisement

ಪಿಲಾರುಕಾನ: ತ್ಯಾಜ್ಯ ತೊಟ್ಟಿಯಾಗಿದೆ ದೇವರಕಾಡು !

07:05 AM Mar 22, 2018 | |

ಶಿರ್ವ: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಪಿಲಾರುಕಾನ ರಕ್ಷಿತಾರಣ್ಯದ ನಡುವೆ ಹಾದು ಹೋಗುವ ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿಯ ಬದಿಯ ಪಿಲಾರುಕಾನ ಮಹಾಲಿಂಗೇಶ್ವರ ದೇವರ ಕಾಡು ಎಂದು ಪ್ರಸಿದ್ಧಿ ಪಡೆದ ಈ ಸ್ಥಳ ಈಗ ತ್ಯಾಜ್ಯದ ತೊಟ್ಟಿಯಾಗಿದೆ !

Advertisement

ಪ್ರಧಾನ ಮಂತ್ರಿಯವರ ಸ್ವತ್ಛ ಭಾರತ -ಸ್ವಸ್ಥ ಭಾರತ ಪರಿಕಲ್ಪನೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡದೆ ರಸ್ತೆ ಬದಿ ಕಸ ರಾಶಿ ಹರಡಲಾಗಿದೆ. ಯಾರೋ ರಾತ್ರಿ ಅಥವಾ ಮುಂಜಾನೆ ಕಸ ತಂದು ಸುರಿಯುತ್ತಿದ್ದು. ಅದನ್ನು ನಾಯಿ, ನರಿ, ಹಂದಿಗಳು ರಸ್ತೆಗೆ ಎಳೆದು ತಂದು ತಿನ್ನುವುದರಿಂದ ಪರಿಸರವಿಡೀ ದುರ್ವಾಸನೆಯಿಂದ ಕೂಡಿದ್ದು ಸಾರ್ವ ಜನಿಕರು ಮೂಗು ಮುಚ್ಚಿ ಓಡಾಡು ವಂತಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಸ ತ್ಯಾಜ್ಯ ಒಟ್ಟಾಗಿ ಕೊಳೆತು ದುರ್ನಾತ ಬೀರುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಅರಣ್ಯ ಪಾಲಕರು ಇದು ದೇವರ ಕಾಡು, ಇಲ್ಲಿ ಕಸ ಎಸೆಯಬೇಡಿ ಎಂದು ಎಚ್ಚರಿಕೆ ಫಲಕ ಹಾಕಿದರೂ (ಅ)ನಾಗರಿಕರು ಕಿವಿಗೊಡುತ್ತಿಲ್ಲ. ತಮ್ಮದೇ ಊರಿನ ಶುಚಿತ್ವ ಕಾಪಾಡುವಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ.
-ಆಲ್ವಿನ್‌ ದಾಂತಿ ಪೆರ್ನಾಲು, ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next