Advertisement

ಪಿಕಾರ್ಡ್‌ ಬ್ಯಾಂಕ್‌: ಕ್ಷೇತ್ರಗಳ ವಿಂಗಡಣೆ, ಮೀಸಲಾತಿ ನಿಗದಿ

09:57 PM Oct 08, 2019 | Lakshmi GovindaRaju |

ಕೆ.ಆರ್‌.ನಗರ: ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ 14 ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲಾಗಿದೆ.

Advertisement

ಡಿಸೆಂಬರ್‌ ಅಂತ್ಯಕ್ಕೆ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮುಕ್ತಾಯಗೊಂಡು ಜನವರಿಯಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿ ಮಾಡಿರುವುದರಿಂದ ಆಕಾಂಕ್ಷಿಗಳು ಚುನಾವಣೆಗೆ ಸ್ಫರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಹಕಾರ ಕಾಯ್ದೆ ಪ್ರಕಾರ ಕ್ಷೇತ್ರಗಳ ವಿಂಗಡಣೆಯನ್ನು ಭೌಗೋಳಿಕ ಮತ್ತು ಸಾಲಗಾರ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮತ್ತು ಮೀಸಲಾತಿ ನಿಗದಿಯಾಗಿದ್ದು, 6 ಹೋಬಳಿಗಳ ಪೈಕಿ 5 ಹೋಬಳಿಗೆ ತಲಾ ಎರಡು ಸ್ಥಾನ ಮತ್ತು ಹೆಚ್ಚು ಸಾಲಗಾರ ಸದಸ್ಯರು ಇರುವ ಹೊಸ ಅಗ್ರಹಾರ ಹೋಬಳಿಗೆ 3 ಸ್ಥಾನ ಕಾಯ್ದಿರಿಸಲಾಗಿದೆ.

ಕಸಬಾ ಹೋಬಳಿ: ಕಸಬಾ ಹೋಬಳಿಯ ಕೆ.ಆರ್‌.ನಗರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇದರ ವ್ಯಾಪ್ತಿಗೆ ಕೆ.ಆರ್‌.ನಗರ ಪಟ್ಟಣ, ಕಂಠೇನಹಳ್ಳಿ, ಲಾಳನಹಳ್ಳಿ, ಬಸವರಾಜಪುರ, ಲಾಳಂದೇವನಹಳ್ಳಿ, ಮಾರ್ಚಹಳ್ಳಿ, ವಡ್ಡರಹಳ್ಳಿ, ಮೂಲೆಪೆಟ್ಲು, ಹೊಸಹಳ್ಳಿ, ಡೋರ್ನಹಳ್ಳಿ, ಬಸವಾಪಟ್ಟಣ, ಹಂಗರಬಾಯನಹಳ್ಳಿ, ದೊಡ್ಡೇಕೊಪ್ಪಲು, ಕುಂಬಾರಕೊಪ್ಪಲು, ಅರಕೆರೆ, ಅರಕೆರೆಕೊಪ್ಪಲು, ಚೌಕಹಳ್ಳಿ, ಕಾಳೇನಹಳ್ಳಿ, ಮಾರಿಗುಡಿಕೊಪ್ಪಲು ಮತ್ತು ಕೆಂಪನಕೊಪ್ಪಲು ಗ್ರಾಮಗಳು ಒಳಪಡಲಿವೆ.

ತಿಪ್ಪೂರು ಕ್ಷೇತ್ರ: ತಿಪ್ಪೂರು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಕ್ಷೇತ್ರದ ವ್ಯಾಪ್ತಿಗೆ ಕಗ್ಗೆರೆ, ಗೊರಗುಂಡಿ, ನಾರಾಯಣಪುರ, ಕಾಮೇನಹಳ್ಳಿ, ಬೋರೆಕಲ್ಲಹಳ್ಳಿ, ಸಾತಿಗ್ರಾಮ, ಸೌತನಹಳ್ಳಿ, ಹೊಸೂರುಕಲ್ಲಹಳ್ಳಿ, ಚಾಮಲಾಪುರ, ತಿಪ್ಪೂರು, ಕನುಗನಹಳ್ಳಿ, ಡೆಗ್ಗನಹಳ್ಳಿ, ಮೂಡಲಕೊಪ್ಪಲು ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ.

Advertisement

ಹೆಬ್ಬಾಳು ಹೋಬಳಿ: ಹೆಬ್ಬಾಳು ಹೋಬಳಿಗೆ ಎರಡು ಕ್ಷೇತ್ರಗಳನ್ನು ನಿಗದಿ ಮಾಡಲಾಗಿದ್ದು, ಚೀರ್ನಹಳ್ಳಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಈ ವ್ಯಾಪ್ತಿಗೆ ಚಂದಗಾಲು, ಕಾಟ್ನಾಳು, ಚೀರ್ನಹಳ್ಳಿ, ಬ್ಯಾಡರಹಳ್ಳಿ, ಅಡಗನಹಳ್ಳಿ, ಚನ್ನಪ್ಪನಕೊಪ್ಪಲು, ಮಾವತ್ತೂರು, ಮಾರಗೌಡನಹಳ್ಳಿ, ಮಾದಹಳ್ಳಿ, ಶಿರೇನಹಳ್ಳಿ, ಐಚನಹಳ್ಳಿ, ಅರೇಕಲ್‌ಕೊಪ್ಪಲು ಗ್ರಾಮಗಳು ಬರುತ್ತವೆ.

ಹೆಬ್ಬಾಳು ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ್ದು, ಇದಕ್ಕೆ ಹೆಬ್ಬಾಳು, ಹೆಬ್ಬಾಳುಕೊಪ್ಪಲು, ಹೆಬ್ಬಾಳು ಬಡಾವಣೆ, ಸಿದ್ದನಕೊಪ್ಪಲು, ಹೊಸಕೊಪ್ಪಲು, ಡಿ.ಕೆ.ಕೊಪ್ಪಲು, ಸಿದ್ದಾಪುರ, ಗೌಡೇನಹಳ್ಳಿ, ಬೀರನಹಳ್ಳಿ, ಜೋಡಿಗೌಡನಕೊಪ್ಪಲು, ಅರಸನಕೊಪ್ಪಲು ಗ್ರಾಮಗಳು ಒಳಪಡುತ್ತವೆ.

ಚುಂಚನಕಟ್ಟೆ ಹೋಬಳಿ: ಚುಂಚನಕಟ್ಟೆ ಹೋಬಳಿ ವ್ಯಾಪ್ತಿಗೆ ಎರಡು ಕ್ಷೇತ್ರಗಳು ಬರಲಿದ್ದು, ಮಳಲಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ವ್ಯಾಪ್ತಿಗೆ ಶ್ರೀರಾಂಪುರ, ಹೊಸೂರು, ಕಂಚುಗಾರಕೊಪ್ಪಲು, ಕೆಸ್ತೂರು, ಮಳಲಿ, ಚುಂಚನಕಟ್ಟೆ, ಸಾಲೇಕೊಪ್ಪಲು, ಕೆಸ್ತೂರುಕೊಪ್ಪಲು ಗ್ರಾಮಗಳು ಬರಲಿವೆ.

ಹಾಡ್ಯ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಇದಕ್ಕೆ ದಿಡ್ಡಹಳ್ಳಿ, ಜವರೇಗೌಡನಕೊಪ್ಪಲು, ಗುಡುಗನಹಳ್ಳಿ, ಹಾಡ್ಯ, ಕೋಗಿಲೂರು, ಕುಪ್ಪೆ, ಮಾಯಿಗೌಡನಹಳ್ಳಿ, ಅಂಕನಹಳ್ಳಿ, ಸಕ್ಕರೆ, ಸೋಮನಹಳ್ಳಿ, ಹೊಸಕೋಟೆ, ಅಬ್ಬೂರು, ನಿಜಗನಹಳ್ಳಿ, ಬಂಡಹಳ್ಳಿ, ಚಿಕ್ಕಹನಸೋಗೆ, ಚನ್ನಂಗೆರೆ, ದಮ್ಮನಹಳ್ಳಿ, ಹನಸೋಗೆ, ಕಗ್ಗಳ, ಕರ್ತಾಳು, ಕೋಳೂರು, ತಂದ್ರೆ, ನಾಡಪ್ಪನಹಳ್ಳಿ, ಎರೆಮನುಗನಹಳ್ಳಿ, ಮುದ್ದನಹಳ್ಳಿ, ವಡ್ಡರಕೊಪ್ಪಲು, ಹಲಗೇಗೌಡನಕೊಪ್ಪಲು, ಬೆಣಗನಹಳ್ಳಿ, ದೊಡ್ಡಕೊಪ್ಪಲು, ಚಿಬುಕಹಳ್ಳಿ, ದೊಡ್ಡಕೊಪ್ಪಲು, ಚಿಕ್ಕಕೊಪ್ಪಲು, ಹಳಿಯೂರು ಗ್ರಾಮಗಳು ಒಳಪಡಲಿವೆ.

ಸಾಲಿಗ್ರಾಮ ಹೋಬಳಿ: ಸಾಲಿಗ್ರಾಮ ಹೋಬಳಿ ವ್ಯಾಪ್ತಿಗೆ ಅಂಕನಹಳ್ಳಿ ಮತ್ತು ಸಾಲಿಗ್ರಾಮ ಕ್ಷೇತ್ರಗಳು ಇದ್ದು, ಸಾಲಿಗ್ರಾಮವು ಸಾಮಾನ್ಯ ವರ್ಗದ್ದಾಗಿದ್ದು, ಇದಕ್ಕೆ ಚಿಕ್ಕನಾಯಕನಹಳ್ಳಿ, ಬೈಲಾಪುರ, ಬೇವಿನಹಳ್ಳಿ, ಲಕ್ಷ್ಮೀಪುರ, ಬಳ್ಳೂರು, ಗಾಯನಹಳ್ಳಿ, ಗುಮ್ಮನಹಳ್ಳಿ, ಕೆಡಗ, ಪಶುಪತಿ, ಹೆಬೂರು, ಹೊನ್ನೇನಹಳ್ಳಿ, ಸರಗೂರು, ಮಾವನೂರು, ಲಕ್ಕೀಕುಪ್ಪೆ, ರಾಂಪುರ ಗ್ರಾಮಗಳು ಸೇರಲಿವೆ.

ಅಂಕನಹಳ್ಳಿ ಕ್ಷೇತ್ರವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಕ್ಷೇತ್ರದ ವ್ಯಾಪ್ತಿಗೆ ಕಳ್ಳಿಮುದ್ದನಹಳ್ಳಿ, ಮೂಡಲಬೀಡು, ಮಾದಾಪುರ, ಮುಂಡೂರು ಕುಲುಮೆಹೊಸೂರು, ಬಸವರಾಜಪುರ, ಬೆಟ್ಟಹಳ್ಳಿ, ಮನುಗನಹಳ್ಳಿ, ಶೀಗವಾಳು, ಹರದನಹಳ್ಳಿ, ಕಾಳಮ್ಮನಕೊಪ್ಪಲು, ಸಾಲುಕೊಪ್ಪಲು, ಸುಬ್ಬೇಗೌಡನಕೊಪ್ಪಲು, ದೊಡ್ಡಕೊಪ್ಪಲು, ದಡದಹಳ್ಳಿ, ಎಲ್ಲೇದಹಳ್ಳಿಗಳು ಸೇರಿವೆ.

ಮಿರ್ಲೆ ಹೋಬಳಿ: ಮಿರ್ಲೆ ಹೋಬಳಿ ವ್ಯಾಪ್ತಿಯ ತಂದ್ರೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇದು ಕಾಟ್ನಾಳು, ತಂದ್ರೆಅಂಕನಹಳ್ಳಿ, ಕುರುಬಹಳ್ಳಿ, ಬಾಚಹಳ್ಳಿ, ಎಲೆಮುದ್ದನಹಳ್ಳಿ, ಎಲೆಮುದ್ದನಹಳ್ಳಿಕೊಪ್ಪಲು, ಸಂಕನಹಳ್ಳಿ, ಕೆಂಚನಹಳ್ಳಿ, ಮುದುಗುಪ್ಪೆ, ಕುಪ್ಪಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ.

ಮಿರ್ಲೆ ಕ್ಷೇತ್ರವು ಹಿಂದುಳಿದ ಬಿ ವರ್ಗಕ್ಕೆ ನಿಗದಿಯಾಗಿದ್ದು, ಬೀಚನಹಳ್ಳಿ, ಕೊಪ್ಪಲು, ಮಿರ್ಲೆ, ಹಳೇಮಿರ್ಲೆ, ನಾಟನಹಳ್ಳಿ, ಶ್ಯಾಬಾಳು, ನರಚನಹಳ್ಳಿ, ವಡ್ಡರಕೊಪ್ಪಲು, ಮಾಳನಾಯಕನಹಳ್ಳಿ, ಹನುಮನಹಳ್ಳಿ, ಕೊಡಿಯಾಲ, ಮೇಲೂರು ಗ್ರಾಮಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಹೊಸಅಗ್ರಹಾರ ಹೋಬಳಿ: ಹೊಸಅಗ್ರಹಾರ ಹೋಬಳಿಗೆ ಮೂರು ಸ್ಥಾನಗಳನ್ನು ನಿಗದಿ ಮಾಡಲಾಗಿದ್ದು, ಭೇರ್ಯ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಚಿಕ್ಕವಡ್ಡರಗುಡಿ, ದೊಡ್ಡವಡ್ಡರಗುಡಿ, ಅರ್ಜುನಹಳ್ಳಿ, ಬೊಮ್ಮೇನಹಳ್ಳಿ, ಹರಂಬಳ್ಳಿ, ಹರಂಬಳ್ಳಿಕೊಪ್ಪಲು, ಮಂಡಿಗನಹಳ್ಳಿ, ಬೋರೇಗೌಡನಕೊಪ್ಪಲು, ಸುಗ್ಗನಹಳ್ಳಿ, ಬಟಿಗನಹಳ್ಳಿ, ಚಿಕ್ಕಭೇರ್ಯ, ಮುಂಜನಹಳ್ಳಿ, ಅರಕೆರೆ, ಕಾವಲುಹೊಸೂರು, ಗುಳುವಿನಅತ್ತಿಗುಪ್ಪೆ, ಗೇರದಡ, ಸಂಬ್ರವಳ್ಳಿ ಗ್ರಾಮಗಳು ಒಳಪಡಲಿವೆ.

ದೊಡ್ಡಕೊಪ್ಪಲು ಕ್ಷೇತ್ರ ಸಾಮಾನ್ಯ ಮಹಿಳಾ ವರ್ಗಕ್ಕೆ ನಿಗದಿಯಾಗಿದ್ದು, ಕಾರ್ಗಳ್ಳಿ, ಗಳಿಗೆಕೆರೆ, ಅಡಗೂರು, ಮಾರಗೌಡನಹಳ್ಳಿ, ಆಲಂಬಾಡಿಕಾವಲು ಗ್ರಾಮಗಳ ವ್ಯಾಪ್ತಿಯೊಳಗೊಂಡಿದ್ದು, ಜತೆಗೆ ಮಂಚನಹಳ್ಳಿ ಕ್ಷೇತ್ರ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದು, ಸನ್ಯಾಸಿಪುರ, ಹಂಪಾಪುರ, ಬಾಲೂರು, ಬಾಲೂರುಹೊಸಕೊಪ್ಪಲು, ಗಂಧನಹಳ್ಳಿ, ಬಡಕನಕೊಪ್ಪಲು, ಕಲ್ಯಾಣಪುರ, ಕಂಚಿನಕೆರೆ ಗ್ರಾಮಗಳನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next