Advertisement

ಯುವಜನರಿಗಾಗಿ ಫೋಟೋಗ್ರಫಿ ಶಿಬಿರ

09:39 PM Nov 06, 2021 | Team Udayavani |

ಹೊನ್ನಾವರ: ಬಂಡಾಯ ಪ್ರಕಾಶನ ಹೊನ್ನಾವರ, ಸಹಮತ ಮಂಗಳೂರು ಇವುಗಳ ಸಹಯೋಗದಲ್ಲಿ ಆಸಕ್ತ ವಿದ್ಯಾರ್ಥಿ ಯುವಜನರಿಗಾಗಿ ಛಾಯಾಗ್ರಹಣ ತರಬೇತಿ ಶಿಬಿರವು ಸಹಯಾನ ಕೆರೆಕೋಣದಲ್ಲಿ ನಡೆಯಿತು.

Advertisement

ಮಂಗಳೂರು ಸಹಮತ ಸಂಚಾಲಕ, ನಿವೃತ್ತ ಪ್ರಾಧ್ಯಾಪಕ ಮತ್ತು ಹವ್ಯಾಸಿ ಛಾಯಾಗ್ರಾಹಕ ಐವನ್‌ ಡಿಸಿಲ್ವ ಪ್ರಾಸ್ತಾವಿಕ ಮಾತನಾಡಿ ಛಾಯಾಗ್ರಹಣವು ಸಮಾಜದ ಆಗುಹೋಗುಗಳ ದಾಖಲೀಕರಣದ ದೃಷ್ಟಿಯಿಂದ ಅಪಾರ ಸಾಧ್ಯತೆಗಳನ್ನು ಹೊಂದಿದ್ದು ಯುವಜನತೆ ಛಾಯಾಗ್ರಹಣದ ತಂತ್ರಗಳನ್ನು ಸೂಕ್ತವಾಗಿ ಕಲಿಯಬೇಕಾಗಿದೆ. ಇದಕ್ಕಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಯುವಜನರ ಆಸಕ್ತಿಯನ್ನು ಗಮನಿಸಿ ಸಹಮತ ಮತ್ತು ಬಂಡಾಯ ಪ್ರಕಾಶನಗಳ ಸಹಯೋಗದಲ್ಲಿ ಎರಡು ದಿನಗಳ ಛಾಯಾಗ್ರಹಣ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.

ಬಂಡಾಯ ಪ್ರಕಾಶನದ ಯಮುನಾ ಗಾಂವ್ಕರ್‌ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯು ಅಪಾರ ಅಭಿವೃದ್ಧಿಯ ಸಾಧ್ಯತೆಗಳು ಇದ್ದಾಗ್ಯೂ ಹಿಂದುಳಿದಿದ್ದು ಗ್ರಾಮೀಣ ಭಾಗದ ಆಯೋಜಿಸಲಾದ ಫೋಟೋಗ್ರಫಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಹಯಾನದ ಮಂಜುನಾಥ ಶೆಟ್ಟಿ ಮಾತನಾಡಿ ಛಾಯಾಚಿತ್ರಗಳು ಇತಿಹಾಸ, ವರ್ತಮಾನದ ದಾಖಲೆಗಳಾಗುತ್ತವೆ. ಸಮಾಜದ, ಕುಟುಂಬದ, ವಿವಿಧ ಸಮುದಾಯಗಳ ಬವಣೆ, ನೋವು, ನಲಿವುಗಳ ಪ್ರತಿಬಿಂಬವಾಗಿ ಕಾಣುತ್ತವೆ ಎಂದರು. ಶಿಬಿರಾರ್ಥಿಗಳಿಗೆ ಛಾಯಾಗ್ರಹಣದ ಮೂಲತತ್ವಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲು ಬೆಂಗಳೂರಿನ ಬಿಜಿಎಸ್‌ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಮತ್ತು ಹವ್ಯಾಸಿ ಛಾಯಾಗ್ರಾಹಕ ಡಾ| ಅಶೋಕ್‌ ಕೆ.ಆರ್‌. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಬರಹಗಾರ ಹರ್ಷಕುಮಾರ್‌ ಕುಗ್ವೆ, ಕಾವ್ಯ ಮನಮನೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next