ಮುಂಬಯಿ: ಜಾಗತಿಕ ಮಟ್ಟದಲ್ಲಿ ಮಹಿಳೆಯರು ಪ್ರಸ್ತುತ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ಯಾವ ಮನೆಯಲ್ಲಿ ಹೆಣ್ಮಕ್ಕಳನ್ನು ಗೌರವದಿಂದ, ಅಭಿಮಾನದಿಂದ ಕಾಣುತ್ತಾರೋ ಆ ಮನೆ ಸುಖ, ಸಂತೋಷದಿಂದ ತುಂಬಿರುತ್ತದೆ. ಈ ಕಾರಣದಿಂದಲೇ ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯುತ್ತಾರೆ. ನಮ್ಮ ಸಂಘದ ಮಹಿಳೆಯರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಮಹಿಳಾ ವಿಭಾಗದ ಯೋಗದಾನ ನಿರಂತರವಾಗಿ ನೀಡುತ್ತಿದ್ದೇವೆ. ಮಹಿಳೆಯರು ಆರ್ಥಿಕ, ಮಾನಸಿಕ ದೃಷ್ಟಿಯಿಂದ ಇನ್ನಷ್ಟು ಸದೃಢರಾಗಬೇಕು. ಮಹಿಳೆಯರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ ನುಡಿದರು.
ಮಾ. 12 ರಂದು ತಿಲಕ್‌ನಗರದ ಆಮಿcಶಾಲಾ ಸಭಾಂಗಣದಲ್ಲಿ ನಡೆದ ತಿಲಕ್‌ನಗರ ಪೆಸ್ತೂಮ್‌ಸಾಗರ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನಡೆದ ವಿಶ್ವಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷ ರಾಮಣ್ಣ ದೇವಾಡಿಗ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯೆಯರು, ಗೌರವ ಸಲಹೆಗಾರರಿಗೆ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಿಶಾಲಾಕ್ಷೀ ವಿ. ಶೆಟ್ಟಿ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಬಿಜೆಪಿ ನಗರ ಸೇವಕಿ ಶುಶಂ ಗೋಪಾಲ್ ಸಾವಂತ್ ಅವರು ಮಾತನಾಡಿ, ನಾನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿಯೆ ಕಾರಣ. ಸ್ತಿÅàಯರಾದ ನಾವೆಲ್ಲರು ಪರಸ್ಪರ ಒಬ್ಬರನ್ನೊಬ್ಬರು ಗೌರವದಿಂದ ಕಾಣಬೇಕು. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಕಾರ ನೀಡುವುದಾಗಿ ತಿಳಿಸಿದರು.
ಅತಿಥಿಯಾಗಿ ಪಾಲ್ಗೊಂಡ ನಿತಿನ್ ಕದಂ ಅವರು ಮಾತನಾಡಿ, ಸಂಘದ ಮಹಿಳೆಯರ ಒಗ್ಗಟ್ಟನ್ನು ಕಂಡಾಗ ಸಂತೋಷವಾಗುತ್ತಿದೆ. ಮಹಿಳೆಯರು ಸಹನಾಶಕ್ತಿ ಹೊಂದಿದ್ದು, ಎಲ್ಲ ರಂಗದಲ್ಲೂ ಗಂಡಸರಿಗೆ ಸರಿಸಾಟಿಯಾಗಿದ್ದಾರೆ ಎಂದರು. ಮತ್ತೋರ್ವೆ ಡಾ| ಸತ್ಯಾ ಸೀತಾರಾಮ್ ಶೆಟ್ಟಿ ಅವರು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಪ್ರಾಮುಖ್ಯತೆ ಇದೆ. ಹೆತ್ತವರು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕು. ತಾಯಿಯ ಒಳ್ಳೆಯ ನಡೆ-ನುಡಿ ಮಕ್ಕಳಿಗೆ ಮಾರ್ಗದರ್ಶಕವಾಗಿರಬೇಕು ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಮಹಿಳೆಯರೆಲ್ಲರೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ. ಮಹಿಳೆಯರಿಗೆಲ್ಲ ಅಭಿನಂದನೆಗಳು ಎಂದರು. ಸ್ಥಾಪಕಾಧ್ಯಕ್ಷ ಶೇಖರ್ ಶೆಟ್ಟಿ, ಗೌರವ ಸಲಹೆಗಾರರಾದ ವಿಜಯಾ ಬ್ಯಾಂಕಿನ ನಿವೃತ್ತ ಎಜಿಎಂ ಶ್ರೀಧರ ಶೆಟ್ಟಿ, ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಶೆಟ್ಟಿ, ಯಕ್ಷಗಾನ ಗುರು ಟಿ. ಆರ್. ಶೆಟ್ಟಿ, ಉದ್ಯಮಿಗಳಾದ ನಿತಿನ್ ನಿಕಂ, ಸತೀಶ್ ಶೆಟ್ಟಿ, ಶರತ್ ವಿಜಯ ಶೆಟ್ಟಿ, ತೇಜಸ್ ಜೆ. ಮೊಲಿ, ಸತೀಶ್ ದೇವಾಡಿಗ, ಶ್ರದ್ಧಾ ಮೊಲಿ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ನಿತ್ಯಾನಂದ ಶೆಟ್ಟಿ, ರಾಮಣ್ಣ ದೇವಾಡಿಗ, ನಾಗವೇಣಿ ಶೆಟ್ಟಿ, ಮಾಲತಿ ಜೆ. ಮೊಲಿ, ಜಯಂತಿ ಆರ್. ಮೊಲಿ ಅವರು ಅತಿಥಿಗಳನ್ನು ಗೌರವಿಸಿದರು.
ಗೌರವ ಕಾರ್ಯದರ್ಶಿ ಮಾಲತಿ ಮೊಲಿ ಕಾರ್ಯಕ್ರಮ ನಿರ್ವಹಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ಭರತ್ ವಿ. ಶೆಟ್ಟಿ, ಶಿಲ್ಪಾ ಶೆಟ್ಟಿ, ದೀಪಾ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಮಹಿಳೆಯರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಸುರೇಶ್ ಶೆಟ್ಟಿ, ಸಂಪತ್ ಶೆಟ್ಟಿ, ಶಿವ ಶೆಟ್ಟಿ, ಕರುಣಾಕರ ಶೆಟ್ಟಿ, ಚಂದ್ರ ಶೆಟ್ಟಿ, ಸುಗಂಧಿ ಶೆಟ್ಟಿ, ರಾಗಿಣಿ ಶೆಟ್ಟಿ, ವೇದಾ ಶೆಟ್ಟಿ, ಕವಿತಾ ಶ್ರೀಯಾನ್, ಹೇಮಾ ಶೆಟ್ಟಿ, ಕುಶಲಾ ಶೆಟ್ಟಿ, ಕುಸುಮಾ ಬಂಗೇರ, ವನಿತಾ ಶೆಟ್ಟಿ, ಜಯಶ್ರೀ, ವಿದ್ಯಾ, ಆಶಾ ಸುರೇಶ್ ಶೆಟ್ಟಿ, ಶಕುಂತಳಾ ಶೆಟ್ಟಿ, ಆಶಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಪ್ರಮೀಳಾ ಶೆಟ್ಟಿ, ಸರಿತಾ ಶೆಟ್ಟಿ, ವೀಣಾ ಕುಂದರ್, ಶೀಲಾ ಶೆಟ್ಟಿ, ಕಸ್ತೂರಿ ಶೆಟ್ಟಿ, ಛಾಯಾ ಶೆಟ್ಟಿ, ಸುಮನಾ ಶೆಟ್ಟಿ, ವಿಶಾಲಾಕ್ಷೀ ಶೆಟ್ಟಿ, ನಿರ್ಮಲಾ ದೇವಾಡಿಗ ಅವರು ಸಹಕರಿಸಿದರು. ಜತೆ ಕಾರ್ಯದರ್ಶಿ ಸುಧಾ ರಾವ್, ಜತೆ ಕೋಶಾಧಿಕಾರಿ ಸುಖಲತಾ ಶೆಟ್ಟಿ ಉಪಸ್ಥಿತರಿದ್ದರು. ಉಪ ಕಾರ್ಯಾಧ್ಯಕ್ಷೆ ಶಾಲಿನಿ ಶೆಟ್ಟಿ ವಂದಿಸಿದರು. ಉದ್ಯಮಿ ಸತೀಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.