Advertisement

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

10:37 PM Jan 28, 2022 | Team Udayavani |

ಮೆಲ್ಬರ್ನ್: ಪರ್ತ್‌ ಸ್ಕಾರ್ಚರ್ 4ನೇ ಬಾರಿಗೆ ಬಿಗ್‌ ಬಾಶ್‌ ಲೀಗ್‌ ಚಾಂಪಿಯನ್‌ ಆಗಿದೆ. ಶುಕ್ರವಾರದ ಫೈನಲ್‌ನಲ್ಲಿ ಅದು ಕೋವಿಡ್‌ನಿಂದ ತತ್ತರಿಸಿದ ಸಿಡ್ನಿ ಸಿಕ್ಸರ್ ವಿರುದ್ಧ 79 ರನ್ನುಗಳ ಜಯ ದಾಖಲಿಸಿತು.

Advertisement

ಪರ್ತ್‌ ಸ್ಕಾರ್ಚರ್ 6 ವಿಕೆಟಿಗೆ 171 ರನ್‌ ಗಳಿಸಿದರೆ, ಸಿಡ್ನಿ ಸಿಕ್ಸರ್ 16.2 ಓವರ್‌ಗಳಲ್ಲಿ 92 ರನ್ನಿಗೆ ಆಲೌಟ್‌ ಆಯಿತು. ಪರ್ತ್‌ ಪರ ಲಾರೀ ಇವಾನ್ಸ್‌ ಅಜೇಯ 76, ನಾಯಕ ಆ್ಯಶrನ್‌ ಟರ್ನರ್‌ 54 ರನ್‌ ಹೊಡೆದರು. ಬೌಲಿಂಗ್‌ನಲ್ಲಿ ಮಿಂಚಿದ ಆ್ಯಂಡ್ರೂé ಟೈ 15 ರನ್ನಿಗೆ 3 ವಿಕೆಟ್‌ ಕೆಡವಿದರು. ಸಿಡ್ನಿ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಡೇನಿಯಲ್‌ ಹ್ಯೂಸ್‌ (42) ಮಾತ್ರ.

ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಸಂಕ್ಷಿಪ್ತ ಸ್ಕೋರ್‌: ಪರ್ತ್‌ ಸ್ಕಾರ್ಚರ್-6 ವಿಕೆಟಿಗೆ 171, (ಲಾರೀ ಇವಾನ್ಸ್‌ ಅಜೇಯ 76). ಸಿಡ್ನಿ ಸಿಕ್ಸರ್-16.2 ಓವರ್‌ಗಳಲ್ಲಿ 92 (ಹ್ಯೂಸ್‌ 42, ಟೈ 15ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next