Advertisement

Wayanad: ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಶೀಘ್ರ ಸಭೆ?

10:08 PM Nov 11, 2024 | Team Udayavani |

ವಯನಾಡ್‌: ಬಂಡಿಪುರ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಸಂಬಂಧಿಸಿದಂತೆ ನ. 13ರ ಉಪಚುನಾವಣೆಯ ಬಳಿಕ ಕೇರಳ ಮತ್ತು ಕರ್ನಾಟಕ ಅಧಿಕಾರಿಗಳ ಮಧ್ಯೆ ಸಭೆ ನಡೆಸುವ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

Advertisement

ಕೇರಳದ ವಯನಾಡ್‌ ಲೋಕಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಈ ವಿಷಯ ತಿಳಿಸಿದ್ದಾರೆ. ಪ್ರಿಯಾಂಕಾ ವಾದ್ರಾ ಸ್ಪರ್ಧಿಸಿರುವ ವಯನಾಡ್‌ ಲೋಕಸಭೆ ಕ್ಷೇತ್ರದಲ್ಲಿ ಸಂಚಾರ ನಿಷೇಧ ತೆರವು ಸ್ಥಳೀಯರ ಬೇಡಿಕೆಯಾಗಿದೆ. ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ 10 ವರ್ಷಗಳ ಹಿಂದೆ ಬಂಡೀಪುರ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರವನ್ನು ಕರ್ನಾಟಕವು ನಿಷೇಧಿಸಿದೆ.

ಸರಕಾರದ ಈ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ ಕೇರಳದ ಸ್ಥಳೀಯರು ಮಾತ್ರ ರಾತ್ರಿ ಸಂಚಾರ ತೆರವಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next