Advertisement
ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ವಿವಿಧ ಶೆ„ಕ್ಷಣಿಕ ವಿಭಾಗಗಳ ಅಧ್ಯಾಪಕ ಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಶಿಕ್ಷಕರೇ ಹೀರೋ ಗಳಾಗಿರುತ್ತಾರೆ. ತರಗತಿಯಲ್ಲಿ ಪ್ರಸ್ತುತಪಡಿಸುವ ವಿಚಾರ ಮತ್ತು ಶೈಲಿ ವ್ಯಾಪಕ ಪ್ರಭಾವ ಬೀರುತ್ತವೆ. ಪಠ್ಯದ ಚರ್ಚೆಯ ಪ್ರತಿಯೊಂದು ವಿವರವನ್ನೂ ವಿದ್ಯಾರ್ಥಿಗಳು ಗ್ರಹಿಸುವುದಕ್ಕೆ ಬೋಧಕರ ವ್ಯಕ್ತಿ ವೈಶಿಷ್ಟéವೂ ಕಾರಣವಾಗಿರುತ್ತದೆ. ಅವರ ವ್ಯಕ್ತಿತ್ವವೂ ಬೋಧನೆಯ ಪರಿಣಾಮ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಬೋಧಕರು ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಆದ್ಯತೆ ನೀಡಬೇಕು ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಉಪಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ| ಕೆ. ಎಸ್. ಮೋಹನ ನಾರಾಯಣ ಸ್ವಾಗತಿಸಿದರು. ಡಾ| ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ದಿನೇಶ್ ಚೌಟ ವಂದಿಸಿದರು. 90ರ ದಶಕದ ಅನಂತರ ಶೆ„ಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳಾಗಿವೆ. ವ್ಯಕ್ತಿಗತ ಮತ್ತು ಸಾಮಾಜಿಕ ಬದುಕನ್ನು ಶೆ„ಕ್ಷಣಿಕ ರಂಗ ಮರುರೂಪಿಸಿದೆ. ಆಧುನಿಕ ದೃಷ್ಟಿಕೋನದೊಂದಿಗಿನ ಚಿಂತನೆಯ ನೆರವಿನೊಂದಿಗೆ ಹೊಸ ಅಲೆಯನ್ನು ಸೃಷ್ಟಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಅದಕ್ಕನುಗುಣವಾಗಿ ಸಾಮರ್ಥ್ಯ ರೂಢಿಸಿಕೊಂಡರೆ ಮಾತ್ರ ಭಿನ್ನ ಹೊಣೆಗಾರಿಕೆಗಳನ್ನು ನಿಭಾಯಿಸಬಹುದು ಎಂಬುದನ್ನು ಬೋಧಕರು ಮನಗಾಣಬೇಕು.
-ಡಾ| ಡಿ. ವೀರೇಂದ್ರ ಹೆಗ್ಗಡೆ