ಕೊಲ್ಕತ್ತಾ : ನಾನು ಗಾಯಗೊಂಡಿದ್ದೇನೆ. ನಾನು ಬದುಕುಳಿದಿದ್ದು ನನ್ನ ಅದೃಷ್ಟ. ಪ್ಲ್ಯಾಸ್ಟರ್ ಇದೆ. ನನಗೆ ನಡೆಯಲು ಸಾಧ್ಯವಿಲ್ಲ. ಕೆಲವರು ಈ ಮುರಿದ ಕಾಲಿನಿಂದ ನಾನು ಹೊರಬರಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದರು. ‘ನನಗೆ ನನ್ನ ನೋವಿಗಿಂತ ಜನರ ನೋವು ದೊಡ್ಡದು’ ಎಂದು ಚುನಾವಣಾ ಪ್ರಚಾರದ ವೇಳೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಿನ್ನೆ(ಆದಿತ್ಯವಾರ, ಮಾ.14) ಗಾಲಿ ಕುರ್ಚಿಯಲ್ಲಿ ಕುಳಿತು ಚುನಾವಣಾ ಪ್ರಚಾರ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದು(ಸೋಮವಾರ, ಮಾ.15) ಪುರುಲಿಯಾದಲ್ಲಿ ಗಾಲಿ ಕುರ್ಚಿಯ ಮೇಲೆ ಕುಳಿತುಕೊಂಡು ಸುಮಾರು 300 ಕಿ.ಮೀ ಪ್ರಯಾಣ ಮಾಡಲಿದ್ದಾರೆ.
ಓದಿ : ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂದರ್ಶಕ ಉಪನ್ಯಾಸಕಿಯಾಗಿ ರಿಲಯನ್ಸ್ ಒಡತಿ ನೀತಾ ಅಂಬಾನಿ..?
ಇನ್ನು, ಬಿಜೆಪಿ ಸುಳ್ಳಿನಿಂದ ಇಲ್ಲಿ ಗೆದ್ದಿದೆ. ಅವರು ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ(ಪುರುಲಿಯಾ) ಜನರಿಗೆ ಹೇಳುವ ಮೂಲಕ ಮಮತಾ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೃಹತ್ ಪ್ರಮಾಣದಲ್ಲಿ ಪುರುಲಿಯಾ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು.
ನಾವು ಅಭಿವೃದ್ಧಿ ಕೆಲಸದತ್ತ ಗಮನಿಸುತ್ತಿದ್ದರೇ, ಬಿಜೆಪಿ ಇಂಧನ ಬೆಲೆಗಳನ್ನು ಹೆಚ್ಚಳ ಮಾಡುತ್ತಾ ಜನರಿಗೆ ಕಷ್ಟ ನೀಡುತ್ತಿದೆ. ನಮ್ಮ ಸರ್ಕಾರ 1000 ರೂ. ವಿಧವೆ ಪಿಂಚಣಿಯನ್ನು ಘೋಷಿಸಿದ್ದೇವೆ. ಡುರೆಯಿ ಸರ್ಕಾರ ಯೋಜನೆ ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸಿದ್ದೇವೆ. ರಘುನಾಥ್ ಮುರ್ಮು ಕ್ಯಾಂಪಸ್ ನಿರ್ಮಾಣ ಮಾಡಿದ್ದೇವೆ ಎಂದು ಮಮತಾ ಹೇಳಿದ್ದಾರೆ.
ಓದಿ : ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ನಟಿ ಮೀಶಾಗೆ 3 ವರ್ಷ ಜೈಲು ಶಿಕ್ಷೆ