Advertisement
ಆದರೆ ಎಲ್‌ಎಸಿಯಲ್ಲಿ ಡ್ರ್ಯಾಗನ್ ಪಡೆ ಭಾರತದ ಮುಂದೆ ದುರ್ಬಲ!
Related Articles
Advertisement
ರಕ್ಷಣಾ ವಿಶ್ಲೇಷಣಾ ಸಂಸ್ಥೆ ಬಿಸಿಎಸ್‌ಐಎ ಪ್ರಕಾರ, ಚೀನದ ಭೂಸೇನೆಯ 2-2.30 ಲಕ್ಷ ಸೈನಿಕರು ವೆಸ್ಟರ್ನ್ ಥಿಯೇಟರ್ ಕಮಾಂಡ್ ವ್ಯಾಪ್ತಿಯ 7 ಪ್ರಾಂತ್ಯಗಳು, ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
ಹೊಸ ಜಂಟಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಪಡೆ ರಚಿಸಿದ್ದರೂ ಅದು ಪಶ್ಚಿಮ ಚೀನದ ಒಳಭಾಗ ದಲ್ಲಿದೆ. ಒಮ್ಮೆ ಅಲ್ಲಿಂದ ಸೇನೆ ಎದ್ದು ಬಂದರೆ, ಸ್ಥಳೀಯರ ದಂಗೆ ಚೀನದ ಮಾನ ಕಳಚಲಿದೆ. ಇವೆಲ್ಲದರ ಕಾರಣಕ್ಕಾಗಿ ಭಾರತದ ಗಡಿಪ್ರದೇಶಗಳ ಸಮೀಪ ವಿರುವ ಟಿಬೆಟ್‌ನಲ್ಲಿ ತೀರಾ ಹರಸಾಹಸಪಟ್ಟು 40 ಸಾವಿರ ಸೈನಿಕರನ್ನು ಗಡಿಗುಂಟ ನಿಲ್ಲಿಸಲು ಚೀನಕ್ಕೆ ಸಾಧ್ಯವಾಗಿದೆ.
ಚೀನ ವಾಯುಪಡೆಯೂ ಇಷ್ಟೇ!: ಭಾರತದ ಗಡಿ ಪ್ರದೇಶಗಳ ಸಮೀಪವಿರುವ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್‌ಫೋರ್ಸ್‌ನ (ಪಿಎಲ್‌ಎಎಫ್) ಮುಂಚೂಣಿಯ ನೆಲೆಗಳು, ಭಾರತದ ವಾಯು ನೆಲೆಗಳಂತೆ ಸುಸಜ್ಜಿತವಾಗಿಲ್ಲ. ಸುರಕ್ಷಿತವೂ ಆಗಿಲ್ಲ. ಹೊತಾನ್, ಲ್ಹಾಸಾ, ಎನ್‌ಗರಿ- ಗುನ್ಸಾ, ಕ್ಸಿಗೇಝ್ ನೆಲೆಗಳನ್ನು ಕಾಶ್ಮೀರ, ಉ. ಭಾರತವನ್ನು ಟಾರ್ಗೆಟ್ ಮಾಡಿ ನಿರ್ಮಿಸಿದ್ದರೂ ಅವು ತಮ್ಮದೇ ಮಿತಿಗಳನ್ನು ಹೊಂದಿವೆ. ಟಿಬೆಟ್, ಕ್ಸಿನ್‌ಜಿಯಾಂಗ್‌ನ ಈ ನೆಲೆಗಳು ಅತಿ ದುರ್ಗಮ ಭೌಗೋಳಿಕ ವಾತಾವರಣ ಹೊಂದಿವೆ. ಹವಾಮಾನದ ರುದ್ರಭಯಂಕರ ಸವಾಲುಗಳ ಕಾರಣಕ್ಕಾಗಿ ಚೀನ ಇಲ್ಲಿ ಕೆಲವೇ ಕೆಲವು ಏರ್‌ಫೈಟರ್‌ಗಳನ್ನು ನಿಯೋಜಿಸಿದೆ. ಪೇಲೋಡ್ ಮತ್ತು ಇಂಧನ ಭರ್ತಿ ಕಾರ್ಯಕ್ಕಷ್ಟೇ ಇಲ್ಲಿ ಸೌಲಭ್ಯಗಳಿವೆ.
ಯೋಜನೆ ಶಾಶ್ವತವಲ್ಲಲಡಾಖ್ನಲ್ಲಿ ಭಾರತ ಶಾಶ್ವತವಾಗಿ ಪಡೆಗಳನ್ನು ನಿಲ್ಲಿಸಿದ್ದರೆ, ಚೀನ ತನ್ನ ಯಾವುದ್ಯಾವುದೋ ಮೂಲೆಯಿಂದ ಸೈನಿಕರನ್ನು ತಂದು ಪ್ಯಾಂಗಾಂಗ್ ತಟದಲ್ಲಿ ನಿಲ್ಲಿಸುತ್ತಿದೆ. ಲಡಾಖ್ ವಾತಾವರಣಕ್ಕೆ ಅವರು ಒಗ್ಗಿಕೊಳ್ಳಲು, ಹಿಮದ ನೆಲದ ಗುಟ್ಟು ಅರಿಯಲೂ ಒದ್ದಾಡುತ್ತಿದ್ದಾರೆ. ಲಡಾಖ್‌ನಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸುವುದಕ್ಕೆ ಭಾರತ 15 ದಿನಗಳನ್ನು ತೆಗೆದುಕೊಂಡರೆ, ಚೀನ 1 ವರ್ಷದಿಂದ ಈ ಕೆಲಸ ನಡೆಸುತ್ತಿದೆ. ಹಿಂದೆ ಸರಿಯಲು ಒಪ್ಪಿಗೆ
ದ್ವಿಪಕ್ಷೀಯ ಒಪ್ಪಂದ, ನಿಯಮಾವಳಿಗಳಿಗೆ ಅನುಸಾರವಾಗಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಸೇನೆ ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನದ ಅಧಿಕಾರಿಗಳು ಶುಕ್ರವಾರ ಒಪ್ಪಿಗೆ ಸೂಚಿಸಿದ್ದಾರೆ. ಭಾರತೀಯ ವಿದೇಶಾಂಗ ಸಚಿವಾಲಯ, ‘ಗಡಿಯಲ್ಲಿ ಪ್ರೊಟೊಕಾಲ್ ಅನುಸರಿಸಿ ಶಾಂತಿಗೆ ಬದ್ಧರಾಗುವುದಾಗಿ ಚೀನ ಸ್ಪಷ್ಟಪಡಿಸಿದೆ’ ಎಂದು ತಿಳಿಸಿದೆ. ವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೇಶನ್ ಆ್ಯಂಡ್ ಕೊಆರ್ಡಿನೇಶನ್ (ಡಬ್ಲ್ಯುಎಂಸಿಸಿ) ಅಡಿ ಯಲ್ಲಿ ಎರಡೂ ರಾಷ್ಟ್ರಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಶುಕ್ರವಾರ ವರ್ಚುವಲ್ ಸಭೆ ನಡೆಸಿದ್ದರು. ಭಾರತ ವಿದೇಶಾಂಗ ಇಲಾಖೆ ಅಧಿಕಾರಿಗಳ ನಿಯೋಗದ ನೇತೃತ್ವ ವನ್ನು ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ವಹಿಸಿದ್ದರು.