Advertisement

ನವ ಉಳ್ಳಾಲ ನಿರ್ಮಾಣಕ್ಕೆ ಜನರ ಸಹಕಾರ ಅಗತ್ಯ

12:59 PM Nov 02, 2017 | Team Udayavani |

ಉಳ್ಳಾಲ: ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಜವಾ ಬ್ದಾರಿ ನಮ್ಮೆಲ್ಲರದ್ದಾಗಿದೆ. ರಾಜ್ಯದ ನಗರಸಭೆ
ಗಳಲ್ಲಿ ಮುಂಚೂಣಿಯಲ್ಲಿರುವ ಉಳ್ಳಾಲ ನಗರ ಸಭೆಯಲ್ಲಿದ್ದು, ನವ ಉಳ್ಳಾಲವಾಗಿ ರೂಪುಗೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ಉಳ್ಳಾಲ ನಗರಸಭಾ ಮಹಾತ್ಮಾ ಗಾಂಧಿ ರಂಗಮಂದಿರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಧ್ವಜಾರೋಹಣಗೈದು, ಉದ್ಘಾಟಿಸಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ರಾಜ್ಯೋತ್ಸವದ ಶುಭಾಶಯ ಕೋರಿದರು.ಪೌರಾಯುಕ್ತೆ ವಾಣಿ ವಿ.ಆಳ್ವ ಏಕತಾ ಶಪಥ ಬೋಧಿಸಿದರು.

ಸವಲತ್ತು ವಿತರಣೆ
ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ವಿಭಾಗದ 16 ಸಿಬಂದಿಗೆ ಧನಸಹಾಯ
ನೀಡಿ ಗೌರವಿಸಲಾಯಿತು. ಶೇ. 24.10ರ ಯೋಜನೆಯಲ್ಲಿ 31 ಫಲಾನುಭವಿಗಳಿಗೆ ಚೆಕ್‌ ವಿತರಣೆ, 15 ಮಂದಿ ಅಂಗ
ವಿಕಲರಿಗೆ ಸಾಧನ ಸಲಕರಣೆ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಯ್ಯದ್‌ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್‌ ರಶೀದ್‌, ನಿತ್ಯಾಧರ್‌ ಚರ್ಚ್‌ನ ಫಾದರ್‌ ಸಲ್ದಾನ, ಮೊಗವೀರ
ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಬಾಬು ಬಂಗೇರ, ನಗರಸಭಾ ಅಧ್ಯಕ್ಷ ಹುಸೈನ್‌ ಕುಂಞಿಮೋನು,
ಉಪಾ ಧ್ಯಕ್ಷೆ ಚಿತ್ರಾ, ಸದಸ್ಯರಾದ ಇಸ್ಮಾಯಿಲ್‌ ಪೊಡಿಮೋನು, ಸುಂದರ್‌ ಉಳಿಯ, ಫಾರೂಕ್‌ ಉಳ್ಳಾಲ್‌,
ಸೂರ್ಯಕಲಾ ಸುರೇಶ್‌, ಮಹಮ್ಮದ್‌ ಮುಕ್ಕಚ್ಚೇರಿ, ದಿನೇಶ್‌ ರೈ, ಮುಸ್ತಫಾ ಉಳ್ಳಾಲ್‌, ಶಶಿಕಲಾ ಶೆಟ್ಟಿ, ಸುಕುಮಾರ್‌, ರಝಿಯಾ ಇಬ್ರಾಹಿಂ, ಫಾರೂಕ್‌ ಯು. ಎಚ್‌., ಬಾಝಿಲ್‌ ಡಿ’ಸೋಜಾ, ಜೇನ್‌ ಶಾಂತಿ ಡಿ’ಸೋಜಾ, ನಾಮನಿರ್ದೇಶಿತ ಸದಸ್ಯರಾದ ವಾರಿಜಾ ಶ್ರೀಯಾನ್‌, ರಿಚರ್ಡ್‌ ವೇಗಸ್‌, ರವಿ ಕಾಪಿಕಾಡ್‌, ಕಿಶೋರ್‌ ಕುಮಾರ್‌, ಯು. ಎಚ್‌. ಹಮ್ಮಬ್ಬ ಮತ್ತು ಕಾವೇರಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಡಾ| ಪ್ರಿಯದರ್ಶಿನಿ ಡಿ’ಸೋಜಾ, ನಗರಸಭೆ ಸದಸ್ಯರು, ಶಿಕ್ಷಕ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು. ವಾಣಿ.ವಿ. ಆಳ್ವ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ರಾಜೇಶ್‌ ಕೆ. ವಂದಿಸಿದರು. ನಗರಸಭಾ ಸದಸ್ಯ ಯು.ಎ.ಇಸ್ಮಾಯಿಲ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next