Advertisement
ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್‌ಟಿ ಬಾಕಿಯನ್ನು ಸಾಲವಾಗಿ ನೀಡುವ ಕೇಂದ್ರ ಸರಕಾರದ ಆಯ್ಕೆಯನ್ನು 21 ರಾಜ್ಯಗಳು ಸ್ವೀಕರಿಸಿವೆ.
Related Articles
ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯಗಳು 2.35 ಲಕ್ಷ ಕೋ.ರೂ. ಜಿಎಸ್‌ಟಿ ಆದಾಯ ಕೊರತೆ ಅನುಭವಿಸಿವೆ. ಕೇಂದ್ರದ ಲೆಕ್ಕಾಚಾರದಂತೆ ಈ ಪೈಕಿ 97 ಸಾವಿರ ಕೋ.ರೂ. ಜಿಎಸ್‌ಟಿ ಜಾರಿ ಸಂಬಂಧಿಯದ್ದಾದರೆ ಇನ್ನುಳಿದ 1.38 ಲಕ್ಷ ಕೋ.ರೂ. ರಾಜ್ಯಗಳ ಜಿಎಸ್‌ಟಿ ಆದಾಯದ ಮೇಲೆ ಕೋವಿಡ್ 19 ಪರಿಣಾಮದಿಂದ ಉಂಟಾಗಿದೆ.
Advertisement
ಕೊರತೆಯಾಗಿರುವ 97 ಸಾವಿರ ಕೋ. ರೂ.ಗಳನ್ನು ಆರ್‌ಬಿಐ ಮೂಲಕ ಸಾಲವಾಗಿ ಪಡೆಯುವ ಅಥವಾ 2.35 ಲಕ್ಷ ಕೋ. ರೂ.ಗಳನ್ನು ಬಾಹ್ಯ ಸಾಲವಾಗಿ ಪಡೆಯುವ ಆಯ್ಕೆಗಳನ್ನು ಕೇಂದ್ರ ಸರಕಾರವು ರಾಜ್ಯಗಳ ಮುಂದೆ ಇರಿಸಿತ್ತು.