Advertisement

‘ಪೆನ್ಸಿಲ್‌ ಬಾಕ್ಸ್‌’ಹಿಡಿದ ಬೋಳಾರ/ವಾಮಂಜೂರು! 

12:44 PM Nov 08, 2018 | |

ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಮನೆ ಮಾತಾದ ಹಾಸ್ಯ ನಟರಾದ ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸ್ಯಾಂಡಲ್‌ವುಡ್‌ ಸಿನೆಮಾದಲ್ಲೂ ತಮ್ಮ ಕಾಮಿಡಿ ಝಳಕ್‌ ಮಾಡಲು ಮುಂದಾಗಿದ್ದಾರೆ. ದೃಶ್ಯ ಮೂವೀಸ್‌ ಅರ್ಪಣೆಯ ದಯಾನಂದ ಎಸ್‌.ರೈ, ವಿನೋದ್‌ ಕುಮಾರ್‌ ಹಾಗೂ ಸತೀಶ್‌ ಶೆಟ್ಟಿ ನಿರ್ಮಾಣದ ರಝಾಕ್‌ ಪುತ್ತೂರು ನಿರ್ದೇಶನದ ಪೆನ್ಸಿಲ್‌ ಬಾಕ್ಸ್‌ ಸಿನೆಮಾದಲ್ಲಿ ಇಬ್ಬರು ಕೂಡ ವಿಭಿನ್ನ ಪಾತ್ರದ ಮೂಲಕ ರಂಜಿಸಲು ರೆಡಿಯಾಗಿದ್ದಾರೆ. 

Advertisement

ರಮೇಶ್‌ ರೈ ಕುಕ್ಕುವಳ್ಳಿ, ಡ್ಯಾನ್ಸ್‌ ಡ್ಯಾನ್ಸ್‌ ಜೂನಿಯರ್‌ ಖ್ಯಾತಿಯ ದೀಕ್ಷಾ ಡಿ.ರೈ ಸೇರಿದಂತೆ ಹಲವು ಖ್ಯಾತ ಕಲಾವಿದರ ಅಭಿನಯದ ಈ ಸಿನೆಮಾ ಪುತ್ತೂರು ಸೇರಿದಂತೆ ಕರಾವಳಿ ಭಾಗದಲ್ಲಿಯೇ ಚಿತ್ರೀಕರಣವಾಗಿದೆ. ಮಕ್ಕಳ ಕಥೆಯಾಧಾರಿತವಾಗಿ ಮೂಡಿಬಂದ ಈ ಸಿನೆಮಾ ಸ್ಯಾಂಡಲ್‌ವುಡ್‌ನ‌ಲ್ಲಿ ಇನ್ನೊಂದು ಕಾಸರಗೋಡು ಸಿನೆಮಾವನ್ನು ನೆನಪು ಮಾಡಲಿದೆ ಎಂಬುದು ಚಿತ್ರತಂಡದ ಅನಿಸಿಕೆ. ಅಂದಹಾಗೆ ಅರವಿಂದ ಬೋಳಾರ್‌ ಈ ಸಿನೆಮಾದಲ್ಲಿ ಕನ್ನಡ ಮೇಸ್ಟರ್‌ ಆಗಿದ್ದರೆ, ವಾಮಂಜೂರು ಪಿಟಿ ಮೇಸ್ಟರ್‌ ಆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next