Advertisement

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

03:32 PM Dec 25, 2024 | Kavyashree |

ವಿಜಯಪುರ: ಕೇಂದ್ರ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನಂತರದಲ್ಲಿ ಯೋಗಿ ಆದಿತ್ಯನಾಥ್ ಅವರಿದ್ದಾರೆ. ನಮ್ಮ ಪಕ್ಷದಲ್ಲಿ ಸಮೃದ್ಧವಾದ ನಾಯಕತ್ವವಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Advertisement

ನಗರದಲ್ಲಿ ಡಿ.25ರ ಬುಧವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ವಾಜಪೇಯಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಜಪೇಯಿ ದೇಶ ಕಂಡ ಅಜಾತುಶತ್ರು. ಇವತ್ತು ಬಿಜೆಪಿ ಹಾಗೂ ದೇಶದ ಭಕ್ತರಿಗೆ ಅಭಿಮಾನ ಪಡುವ ದಿನವಾಗಿದೆ ಎಂದರು.

ಇದೇ ವೇಳೆ, ನಾಯಕತ್ವದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಬಿಜೆಪಿಯಲ್ಲಿ ವಾಜಪೇಯಿ ಅವರ ಬಳಿಕ ಈಗ ನರೇಂದ್ರ ಮೋದಿ ಅವರಿದ್ದಾರೆ. ಮೋದಿ ನಂತರ ಯೋಗಿ ಆದಿತ್ಯನಾಥ್ ಅವರಿದ್ದಾರೆ. ಉಳಿದ ಪಕ್ಷಗಳಲ್ಲಿ ನಾಕಯತ್ವದ ದಿವಾಳಿಯಾಗಿದೆ. ರಾಜ್ಯ ಬಿಜೆಪಿಯಲ್ಲೂ ಮುಂದೆ ಒಳ್ಳೆಯ ನಾಯಕತ್ವ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ. ನಿಶ್ಚಿತವಾಗಿ ಈ ಬಾರಿ ಉತ್ತಮ ನಾಯಕತ್ವ ಬರುತ್ತದೆ ಎನ್ನುವ ಮೂಲಕ ರಾಜ್ಯ ನಾಯಕತ್ವದ ಬದಲಾವಣೆ ಕುರಿತು ಪುನರುಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪತನ: ರಾಜ್ಯದಲ್ಲಿ ರೈತರು, ಕಾರ್ಮಿಕರೊಂದಿಗೆ ಕಾಂಗ್ರೆಸ್ ಚೆಲ್ಲಾಟವಾಡುತ್ತಿದೆ. ಹೀಗಾಗಿ ಮುಂದಿನಗಳಲ್ಲಿ ಈ ಪಕ್ಷ ಸಂಪೂರ್ಣವಾಗಿ ಪತನವಾಗಲಿದೆ. ಅಲ್ಲದೇ, ಸಕ್ಕರೆ ಕಾರ್ಖಾನೆ ಹಾಗೂ ಇತರ ವಿಚಾರಗಳಲ್ಲಿ ನಮಗೆ ತೊಂದರೆ ಕೊಟ್ಟಿರುವ ಫಲವನ್ನು ಕಾಂಗ್ರೆಸ್‌ನವರು ಅನುಭವಿಸಲಿದ್ದಾರೆ ಎಂದರು.

ಬೆಳಗಾವಿಯಲ್ಲಿ ಗಾಂಧಿ ಬಂದು ಹೋಗಿರುವ ಬಗ್ಗೆ ನಡೆಯುತ್ತಿರುವುದು ಮೂಲ ಕಾಂಗ್ರೆಸ್ಸಿನ ಅಧಿವೇಶನವಲ್ಲ. ಅದು ಇವತ್ತಿನ ನಕಲಿ ಕಾಂಗ್ರೆಸ್ಸಿನ ಅಧಿವೇಶನವಾಗಿದೆ. ಬೆಳಗಾವಿಗೆ ಅಂಬೇಡ್ಕರ್ ಕೂಡ ಬಂದು ಹೋಗಿದ್ದರು. ಆದರೆ, ಅಂಬೇಡ್ಕರ್ ಸ್ಮರಣೆ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ದ್ರೋಹಿ ಎನ್ನಲು ತಾಜಾ ಉದಾಹರಣೆ ಎಂದು ಯತ್ನಾಳ್ ಟೀಕಿಸಿದರು.

Advertisement

ಅಲ್ಲದೇ, ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನು ಕತ್ತರಿಸಿ ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ. ಅಂಬೇಡ್ಕರ್ ಅವರನ್ನು ಎರಡು ಬಾರಿ ಯಾರು ಸೋಲಿಸಿದರು?. ಅವರು ನಿಧನರಾದಾಗ ಭೂಮಿಯನ್ನೂ ಕಾಂಗ್ರೆಸ್ಸಿನವರು ಕೊಡಲಿಲ್ಲ. ಅವರಿಗೆ ಭಾರತರತ್ನವನ್ನೂ ಕೊಡಲಿಲ್ಲ. ದೇಶದಲ್ಲಿ ಹಿಂದೂ ಧರ್ಮದಿಂದ ಮಾತ್ರ ಸಂವಿಧಾನ ಉಳಿವು ಸಾಧ್ಯ. ಕಾಂಗ್ರೆಸ್ ಕೇವಲ ಮುಸ್ಲಿಂ ಪಕ್ಷ. ಅದು ದಲಿತ, ಹಿಂದುಳಿದವರ ಪಕ್ಷವಲ್ಲ. ಹಿಂದೂಗಳು, ಸಂವಿಧಾನ ಸುರಕ್ಷಿತವಾಗಬೇಕಾದರೆ ದೇಶದಿಂದ ಕಾಂಗ್ರೆಸ್ ಸರ್ವನಾಶವಾಗಬೇಕು ಎಂದರು.

ಸಿ.ಟಿ.ರವಿ ಪ್ರಕರಣದ ನ್ಯಾಯಾಂಗ ತನಿಖೆಯಾಗಲಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ನಮಗೆ ಸಿಐಡಿ ಮೇಲೆ ವಿಶ್ವಾಸ ಇಲ್ಲ. ಜತೆಗೆ ಅಂದು ರವಿ ಅವರೊಂದಿಗಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಗಂಟೆಗಟ್ಟಲೇ ಫೋನ್ ಮಾತನಾಡುತ್ತಿದ್ದರು. ಅವರು ಯಾರೊಂದಿಗೆ ಮಾತನಾಡುತ್ತಿದ್ದರು, ಯಾರು ಸಂಕರ್ಪದಲ್ಲಿದ್ದರು ಎಂದು ಬಹಿರಂಗ ಪಡಿಸಬೇಕು. ಇವೆಲ್ಲ ಬೆಳವಣಿಗೆ ಗಮನಿಸಿದರೆ, ರವಿ ಅವರನ್ನು ಕೊಲೆ ಮಾಡಬೇಕೆಂಬ ದೊಡ್ಡ ಸಂಚು ನಡೆದಿತ್ತು. ರಾಜ್ಯದಲ್ಲಿ ಗೂಂಡಾಗಳಿಗೆ ಬೆಂಬಲ ಸಿಗುತ್ತಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next