ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ಹಾಕದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ತಹಶೀಲ್ದಾರ್‌ರವಿಶಂಕರ್ ನೇತೃತ್ವದ ಸುರಕ್ಷಾ ಪಡೆ ತಂಡದಿಂದ ದಂಡವಿಧಿಸಲಾಯಿತು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಮಾರುಕಟ್ಟೆಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಹಾಕದೆ,ಸಾಮಾಜಿಕ ಅಂತರ ಪಾಲನೆ ಮಾಡದೆ ಸಂಚರಿಸುತ್ತಿದ್ದಸಾರ್ವಜನಿಕರಿಗೆ ತಲಾ ನೂರು ರೂ. ದಂಡ ವಿಧಿಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ರವಿಶಂಕರ್,ಗುಂಡ್ಲುಪೇಟೆ ಗಡಿ ತಾಲೂಕು ಆಗಿರುವ ಹಿನ್ನೆಲೆಯಲ್ಲಿಹೆಚ್ಚಿನ ನಿಗಾ ವಹಿಸಬೇಕು. ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಕೊರೊನಾ ತಡೆಗೆ ಸಹಕಾರ ನೀಡಿದರೆಮಾತ್ರ ಸೋಂಕಿತರ ಸಂಖ್ಯೆ ಕಡಿಮೆ ಮಾಡಬಹುದು.ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಅಂತರಾಜ್ಯವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿಇಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ಮಾಸ್ಕ್ಧರಿಸಬೇಕು ಎಂದರು.
ಕಲ್ಯಾಣ ಮಂಟಪ ಮಾಲಿಕರ ಜತೆ ಸಭೆ: ಪಟ್ಟಣದತಾಲೂಕು ಕಚೇರಿಯ ತಹಶೀಲ್ದಾರ್ ಕಚೇರಿಯಲ್ಲಿಕಲ್ಯಾಣ ಮಂಟಪ ಮಾಲಿಕರ ಸಭೆ ನಡೆಯಿತು.
ಈ ವೇಳೆತಹಶೀಲ್ದಾರ್ ಮಾತನಾಡಿ, ಕಲ್ಯಾಣ ಮಂಟಪಕ್ಕೆ 100ಮಂದಿಗೆ ಮಾತ್ರ ಅವಕಾಶದ್ದು, ಹೆಚ್ಚು ಜನರು ಒಂದೆಡೆಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಟ್ಟುನಿಟ್ಟಾಗಿ ನಿಯಮ ಪಾಲಿಸ ಬೇಕುಎಂದರು. ತಾಲೂಕು ಆರೋಗ್ಯಾಧಿಕಾರಿ ರಕುಮಾರ್,ಪುರಸಭೆ ಮುಖ್ಯಾಧಿಕಾರಿ ರಮೇಶ್ ಇತರರಿದ್ದರು.