Advertisement
ತಾಲೂಕಿನ ಕೊತ್ತಗೆರೆ ಹೋಬಳಿ ತರೇದಕುಪ್ಪೆ ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಡಿಒ ಚಂದ್ರಹಾಸ್ ಕೆಲ ಸದಸ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಉಳಿದ ಕೆಲ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಒಂದು ಗುಂಪು ಪಿಡಿಒ ವರ್ತನೆ ಖಂಡಿಸಿ ಪ್ರತಿಭಟಿಸಿದರು.
ಯಶೋಧಮ್ಮ, ಶಾಂತಮ್ಮ ಆರೋಪಿಸಿ ಪಕ್ಷ ಬೇಧ ಮಾಡುವ ಈ ಅಧಿಕಾರಿಯನ್ನು ಬೇರೆಡೆಗೆ ವರ್ಗ ಮಾಡುವಂತೆ ಆಗ್ರಹಿಸಿದರು. ಅಲ್ಲದೆ ಕುಡಿಯುವ ನೀರು ಸೇರಿದಂತೆ 14ನೇ ಹಣಕಾಸನ್ನು ಸಮರ್ಪಕವಾಗಿ ನಿರ್ವಹಿಸದೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುವ ಪಿಡಿಒ ಸಾಮಾನ್ಯ ಜನರ ನೋವು ಕೇಳುವುದನ್ನು ಮರೆತಿದ್ದಾರೆಂದು
ದೂರಿದರು. ಸದಸ್ಯ ಹರೀಶ್ ಮಾತನಾಡಿ, ಪಿಡಿಒ ಅವರು ಗ್ರಾಮ ಸಭೆ ಮಾಡಲು ನಮಗೆ ತಿಳಿಸದೇ ತರಾತುರಿಯಲ್ಲಿ ಇರುವ 13
ಸದಸ್ಯರ ಗುಂಪಿನಲ್ಲಿಯೇ ಗುಂಪುಗಾರಿಕೆ ಮಾಡುವ ಮೂಲಕ ಅಧಿಕಾರ ನಡೆಸುತ್ತಿದ್ದಾರೆ, ಎಲ್ ಚುನಾಯಿತ ಸದಸ್ಯರನ್ನು ಪರಿಗಣನೆಗೆ ಪಡೆಯದೇ ಕೆಲವರನ್ನು ಓಲೈಸುವ ಮೂಲಕ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ
ಜಾರಿಗೊಳಿಸಲು ವಿಫಲರಾಗಿದ್ದಾರೆ. ಪಂಚಾಯ್ತಿ ಮುಂಭಾಗವೇ ಚರಂಡಿಗಳು ಕಟ್ಟಿಕೊಂಡು ಗಬ್ಬು ನಾರುತ್ತಿವೆ. ಇರುವ
ಒಂದು ಸಾರ್ವಜನಿಕ ತಂಗುದಾಣದಲ್ಲಿ ಜನರು ನಿಲ್ಲಲಾಗದೇ ಬರೀ ದನ ಎಮ್ಮೆಗಳ ತಾಣವಾಗಿದೆ ಎಂದು ಕಿಡಿಕಾರಿದರು.
Related Articles
ಕೆಲವರಿಗೆ ಪುಕ್ಕಟ್ಟೆ ಮನರಂಜನೆಯಾದರೆ ಮತ್ತೆ ಕೆಲವು ಯುವಕರು ಮತ್ತು ಹಿರಿಯರು ಮಧ್ಯ ಪ್ರವೇಶಿಸಿದರು.
ನಂತರ, ವಾಗ್ವಾದ ಮಾಡುವ ಮೂಲಕ ಪಂಚಾಯ್ತಿಯಲ್ಲಿ ಕುಡಿಯಲು ನೀರಿಲ್ಲ ಸಮರ್ಪಕ ಕೆಲಸಗಳು ಆಗುತ್ತಿಲ್ಲ ಜನ
ಸಾಮಾನ್ಯರ ಕೆಲಸ ಆಗದೇ ಬರಿ ಅಧಿಕಾರ, ಹಣ ಉಳ್ಳವರ ಕೆಲಸ ಮಾಡಲಾಗುತ್ತಿದೆ ಎಂದು ದೂರಿ ಆರೋಪಿಸಿದರು.
ಮುಖಂಡರಾದ ಶಿವರಾಮಯ್ಯ, ಪಾಪಣ್ಣ ಇದ್ದರು.
Advertisement