ಇನ್ನೊಂದೆಡೆ, ಪವನ್ ಖೇರಾ ಅವರಿಗೆ ನಿರೀಕ್ಷಣ ಜಾಮೀನು ಮಂಜೂರು ಮಾಡಿರುವ ಸುಪ್ರೀಂ, ಫೆ.28ರ ವರೆಗೆ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದೆ. ಘಟನೆ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ಯುದ್ಧ ನಡೆದಿದ್ದು, ಪ್ರತಿಭಟನೆಗಳೂ ನಡೆದಿವೆ.
Advertisement
ಆಗಿದ್ದೇನು?: ಇತ್ತೀಚೆಗೆ ಅದಾನಿ ಗ್ರೂಪ್ ವಿರುದ್ಧದ ಹಿಂಡನ್‌ಬರ್ಗ್ ವರದಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ಪ್ರಧಾನಿ ಮೋದಿಯವರನ್ನು “ನರೇಂದ್ರ ಗೌತಮ್‌ದಾಸ್ ಮೋದಿ, ಅಲ್ಲಲ್ಲ ನರೇಂದ್ರ ದಾಮೋದರ್‌ದಾಸ್ ಮೋದಿ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಖೇರಾ ವಿರುದ್ಧ ದೇಶದ ಮೂಲೆ ಮೂಲೆಗಳಲ್ಲೂ ಕೇಸು ದಾಖಲಾಗಿತ್ತು. ಅಸ್ಸಾಂನಲ್ಲಿ ದಾಖಲಾಗಿದ್ದ ಎಫ್ಐಆರ್‌ಗೆ ಅನುಗುಣವಾಗಿ ಖೇರಾರನ್ನು ಬಂಧಿಸಲು ನೆರವಾಗುವಂತೆ ಅಸ್ಸಾಂ ಪೊಲೀಸರು ದಿಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು.
ವಿಮಾನದ ಹೊರಗೆ ಟಾರ್ಮ್ಯಾಕ್ ನಲ್ಲೇ ಕುಳಿತು ಧರಣಿ ಆರಂಭಿಸಿದ ಕಾಂಗ್ರೆಸ್ ನಾಯಕರು, ಖೇರಾ ಅವರನ್ನು ಬಿಡದೇ ವಿಮಾನ ಹಾರಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಜತೆಗೆ “ಜಬ್ ಜಬ್ ಮೋದಿ ಡರ್ತಾ ಹೈ, ಪೊಲೀಸ್ ಕೆ ಪೀಛೆ ಚುಪ್ತಾ ಹೆ’ (ಯಾವಾಗ ಮೋದಿ ಹೆದರುತ್ತಾರೋ, ಪೊಲೀಸರ ಹಿಂದೆ ಅಡಗುತ್ತಾರೆ) ಎಂದು ಘೋಷಣೆಗಳನ್ನು ಕೂಗತೊಡಗಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಇಂಡಿಗೋ ಸಿಬಂದಿ, ಕೂಡಲೇ ಎಲ್ಲ ಪ್ರಯಾಣಿಕರನ್ನೂ ಕೆಳಗಿಳಿಸಿ ಬೇರೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದರು.
Related Articles
ಖೇರಾ ಬಂಧನ ವಿಚಾರವು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರವು ಭಾರತದ ಪ್ರಜಾಸತ್ತೆಯನ್ನು “ಹಿಟ್ಲರ್‌ಶಾಹಿ’ ಮತ್ತು “ಸರ್ವಾಧಿಕಾರ’ವಾಗಿ ಬದಲಾಯಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, “ವಿಪಕ್ಷಗಳ ನಾಯಕರು ತಾವು ಕಾನೂನಿಗಿಂತಲೂ ಮೇಲು ಎಂಬ ತಪ್ಪುಕಲ್ಪನೆಯಲ್ಲಿ ಬದುಕಬಾರದು’ ಎಂದು ಹೇಳಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಸಂಸತ್‌ನಲ್ಲಿ ಧ್ವನಿಯೆತ್ತಿದರೆ ವಿಪಕ್ಷಗಳಿಗೆ ನೋಟಿಸ್ ನೀಡಲಾಗುತ್ತದೆ. ಸಮಾವೇಶ ನಡೆಯುವಾಗಲೇ ಛತ್ತೀಸ್‌ಗಢದಲ್ಲಿ ನಮ್ಮ ನಾಯಕರ ಮೇಲೆ ಇಡಿ ದಾಳಿ ನಡೆಯುತ್ತದೆ. ನಮ್ಮ ವಕ್ತಾರ ಖೇರಾರನ್ನು ಒತ್ತಾಯವಾಗಿ ವಿಮಾನದಿಂದ ಇಳಿಸಿ ಬಂಧಿಸಲಾಗಿದೆ. ಈ ಸರ್ವಾಧಿಕಾರ ವನ್ನು ನಾವು ಖಂಡಿಸುತ್ತೇವೆ’ ಎಂದಿದ್ದಾರೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ, “ಎಲ್ಲವನ್ನೂ ಕಾನೂನುಪ್ರಕಾರವೇ ಮಾಡಲಾಗಿದೆ’ ಎಂದಿದ್ದಾರೆ.
Advertisement